ಬಸವ ಬಳಗದಿಂದ ಶರಣರ ಸ್ಮರಣೋತ್ಸವ

ಬಸವ ಬಳಗದಿಂದ ಶರಣರ ಸ್ಮರಣೋತ್ಸವ

ದಾವಣಗೆರೆ, ಡಿ.1- ಬಸವ ಬಳಗ ದಾವಣಗೆರೆ ವತಿಯಿಂದ ನಗರದ ಸರಸ್ವತಿ ಬಡಾವಣೆಯಲ್ಲಿ ಚೆನ್ನಬಸವಣ್ಣನವರ ಹಾಗೂ ಹರಳಯ್ಯ ಮಧುವಯ್ಯರ ಸ್ಮರಣೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಆವರಗೆರೆ ರುದ್ರಮುನಿ  ವಹಿಸಿಕೊಂಡಿದ್ದರು. ಚಿನ್ಮಯ ಜ್ಞಾನಿ, ಅವಿರಳ ಜ್ಞಾನಿ ಚೆನ್ನಬಸವಣ್ಣನವರ ಬಗ್ಗೆ ಶಿವಯ್ಯ ಅವರು ತಮ್ಮದೇ ಆದ ಅನುಭವದ ನುಡಿಗಳನ್ನು ನುಡಿದರು. ಕದಳಿ ವೇದಿಕೆಯ ಮಾಜಿ ಅಧ್ಯಕ್ಷರಾದ ವಿನೋದ ಅಜಗಣ ಅವರು ಹರಳಯ್ಯ, ಮಧುವಯ್ಯಗಳ ಬಗ್ಗೆ ತಮ್ಮದೇ ಆದ ಅನುಭಾವದ ನುಡಿಗಳನ್ನು ನುಡಿದರು. ಕು. ವಾಣಿ ನಿರೂಪಿಸಿದರು. ವಂದನಾರ್ಪಣೆಯನ್ನು ವೀಣಾ ಮಂಜುನಾಥ್ ನೆರವೇರಿಸಿದರು. 

error: Content is protected !!