ದಾವಣಗೆರೆ, ಡಿ.1- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಆಯುಷ್ ಇಲಾಖೆ ವತಿಯಿಂದ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಯೋಜನೆಯಡಿ ವಿದ್ಯಾರ್ಥಿ ಚೇತನ ಆಯುಷ್ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾಕನೂರಿನ ಸಮಾಜ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜರುಗಿದ ಈ ಕಾರ್ಯಕ್ರಮವನ್ನು ಜಿಲ್ಲಾ ಆಯುಷ್ ಅಧಿಕಾರಿ ಡಾ. ಬಿ. ಯು.ಯೋಗೇಂದ್ರಕುಮಾರ್ ಉದ್ಘಾಟಿಸಿ ಮಾತನಾಡಿದರು.
ಯೋಗ ತರಬೇತುದಾರರಿಂದ ಪ್ರಾತ್ಯಕ್ಷಿಕೆ ಯನ್ನು ನೀಡಲಾಯಿತು. ವೈದ್ಯಾಧಿಕಾರಿಗಳಾದ ಡಾ. ಶಾಲಿನಿ ಡಿ., ಡಾ. ಸದಾಶಿವ ಕೆ, ಡಾ.ಸಿದ್ದೇಶ್, ಡಾ. ಶ್ವೇತ ಡಿ.ಎಂ., ವಸತಿ ನಿಲಯದ ಪ್ರಾಂಶುಪಾಲ ಪುರದ್ ಹಾಗೂ ಇತರರು ಹಾಜರಿದ್ದರು.