ವಕ್ಫ್‌ ವಿರುದ್ಧದ ಹೋರಾಟದ ದಾವಣಗೆರೆ ಸಮಾವೇಶಕ್ಕೆ 10 ಲಕ್ಷ ಜನ ಸೇರಿಸ್ತೇವೆ

ವಕ್ಫ್‌ ವಿರುದ್ಧದ ಹೋರಾಟದ ದಾವಣಗೆರೆ ಸಮಾವೇಶಕ್ಕೆ 10 ಲಕ್ಷ ಜನ ಸೇರಿಸ್ತೇವೆ

ಬೆಳಗಾವಿ, ಡಿ.1- ವಕ್ಫ್‌ ವಿರುದ್ಧದ ಹೋರಾಟದ ಕೊನೆಗೆ ದಾವಣಗೆರೆಯಲ್ಲಿ ಸಮಾವೇಶ ಮಾಡುತ್ತೇವೆ. ಅಲ್ಲಿ 10 ಲಕ್ಷ ಜನರನ್ನು ಸೇರಿಸುತ್ತೇವೆ ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿಯಿಂದ 1 ಲಕ್ಷ ಜನರನ್ನು ಕರೆದೊಯ್ಯುತ್ತೇವೆ. ಸಮಾವೇಶಕ್ಕೆ ಸಾಕಷ್ಟು ಖರ್ಚಾಗುತ್ತದೆ. ಈ ಪೈಕಿ ಬೆಳಗಾವಿಯ ಬಿಜೆಪಿ ಕಾರ್ಯಕರ್ತರಿಂದ 1 ಕೋಟಿ ರೂ. ನಿಧಿ ನೀಡುತ್ತೇವೆ. ನಾನು, ಯತ್ನಾಳ ಸೇರಿ ನಾಯಕರೇ ಸಮಾವೇಶಕ್ಕೆ ಬೇಕಿರುವ ಹಣ ಕೊಡಬಹುದಿತ್ತು. ಹಾಗೆ ಮಾಡಿದರೆ ನಾವು ‘ಪೂಜ್ಯ ತಂದೆ, ಪೂಜ್ಯ ಮಗ’ ಆಗುತ್ತೇವೆ. ಹಾಗಾಗಿ ಕಾರ್ಯಕರ್ತರಿಂದ ಹಣ ಸಂಗ್ರಹಿಸುತ್ತೇವೆ ಎಂದು ಹೇಳಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ, ‘ರಮೇಶ ಜಾರಕಿಹೊಳಿ ಆಪರೇಷನ್‌ ಮಾಡಿದ್ದರಿಂದ ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಈಗ ನಮ್ಮನ್ನು ಆಪರೇಷನ್‌ ಮಾಡುತ್ತಾರಂತೆ. ಇಡೀ ರಾಜ್ಯದಲ್ಲಿ ಆಪರೇಷನ್‌ ಮಾಡುವಲ್ಲಿ ನಾವು ಟಾಪ್‌ಮೋಸ್ಟ್‌ ಡಾಕ್ಟರ್‌ಗಳಿದ್ದೇವೆ. ನಮ್ಮನ್ನು ಆಪರೇಷನ್ ಮಾಡಿದರೆ ನಿಮ್ಮ ನರನಾಡಿಗಳನ್ನೇ ಕಟ್ ಮಾಡುತ್ತೇವೆ’ ಎಂದು ಪರೋಕ್ಷವಾಗಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಹರಿಹಾಯ್ದರು.

error: Content is protected !!