ವಜ್ರೇಶ್ವರಿ ಸಂಸ್ಥೆಯಿಂದ ಎಸ್ಎಲ್‌ಎನ್ ಕಾನ್ವೆಂಟ್‌ನಲ್ಲಿ ಕನ್ನಡ ರಾಜ್ಯೋತ್ಸವ

ವಜ್ರೇಶ್ವರಿ ಸಂಸ್ಥೆಯಿಂದ ಎಸ್ಎಲ್‌ಎನ್ ಕಾನ್ವೆಂಟ್‌ನಲ್ಲಿ ಕನ್ನಡ ರಾಜ್ಯೋತ್ಸವ

ದಾವಣಗೆರೆ, ಡಿ.. 1- ಶ್ರೀ ವಜ್ರೇಶ್ವರಿ ಮಹಿಳಾ ಸಂಸ್ಥೆ ವತಿಯಿಂದ ಎಸ್ಎಲ್ಎನ್ ಕಾನ್ವೆಂಟ್‌ನಲ್ಲಿ ಗಾಂಧಿ ಜಯಂತಿ, ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಆಚರಿಸಲಾಯಿತು.

ಬೆಸ್ಕಾಂನ ಇಬ್ಬರು ಲೈನ್ ಮ್ಯಾನ್‌ಗಳಾದ ವಿ. ಪ್ರಕಾಶ್ ಹಾಗೂ ಕಾಳಾಚಾರಿ ಇವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.

ಕಾರ್ತಿಕ್, ಧೃತಿ ಚೇತನ, ಪ್ರತೀಕ್ಷಾ, ಕಬೀರ್, ಗ್ರೀಷ್ಮ, ಯೋಗೇಶ್‌ ಹಾಗೂ ಕಾನ್ವೆಂಟ್‌ನ ಉಪಾಧ್ಯಾಯರಾದ ಸುಜಾತ ನಾಗೇಶ್ ಅವರಿಗೂ ಈ ಸಂದರ್ಭದಲ್ಲಿ ಗೌರವಿಸಲಾಯಿತು.

ವಿಜಯ ಅಕ್ಕಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಂದ್ರಿಕಾ ವೇಣುಗೋಪಾಲ್ ಕಾರ್ಯಕ್ರಮ ನಿರೂಪಿಸಿದರು. ವಜ್ರೇಶ್ವರಿ ಮಹಿಳಾ ಸಂಸ್ಥೆಯ ಸದಸ್ಯರುಗಳು, ಸಾವಿತ್ರ, ಚಂದ್ರಿಕ, ಜಗನ್ನಾಥ್, ಗಿರಿಜಾ, ಬಿಲ್ಲಳ್ಳಿ ಸಾವಿತ್ರಿ, ನೆಸ್ವಿ ಸುಧಾ, ಸಂತೋಷ್, ಮಮತಾ, ಕೊಟ್ರೇಶ್, ಮೀನಾಕ್ಷಿ, ಪ್ರೇಮಾ ಸೋಮಶೇಖರ್, ಚಂದ್ರಮ್ಮ, ಮತ್ತು ಪ್ರೇಮಾ, ಸುಶ್ಮಿತಾ  ಶಿಕ್ಷಕಿ ಭಾಗ್ಯಲಕ್ಷ್ಮಿ, ಕಾವ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

error: Content is protected !!