ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಅಮಾವಾಸ್ಯೆ ಪೂಜೆ

ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಅಮಾವಾಸ್ಯೆ ಪೂಜೆ

ದಾವಣಗೆರೆ, ನ. 29-  ನಗರದ ಡಿ. ದೇವರಾಜ ಅರಸು ಬಡಾವಣೆಯಲ್ಲಿರುವ ಶ್ರೀ ಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ   ನಾಳೆ ಡಿಸೆಂಬರ್ 1ರ ಕಾರ್ತಿಕ ಅಮಾವಾಸ್ಯೆ (ಛಟ್ಟಿ ಅಮವಾಸ್ಯೆ) ಪೂಜಾ ಕಾರ್ಯಕ್ರಮಗಳು ನಡೆಯಲಿವೆ.

ಬೆಳಿಗ್ಗೆ ಶ್ರೀ ನಾಗಲಿಂಗೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಮೃತ್ಯುಂಜಯ ಹೋಮ, ಪ್ರಧಾನ ದೇವತೆ ಶ್ರೀ ಮಾತಾ ಅನ್ನಪೂರ್ಣೇಶ್ವರಿಗೆ  ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯುವುದು.  ಅದೇ ದಿನ ಸಂಜೆ 6.30ಕ್ಕೆ ಕಾರ್ತಿಕ ಮಾಸದ ಪ್ರಯುಕ್ತ ದೀಪೋತ್ಸವ ಏರ್ಪಾಡಾಗಿದೆ ಎಂದು ದೇವಸ್ಥಾನ ಸಮಿತಿ ಗೌರವ ಅಧ್ಯಕ್ಷ ಆರ್.ಜಿ. ನಾಗೇಂದ್ರ ಪ್ರಕಾಶ್ ತಿಳಿಸಿದ್ದಾರೆ.  ಶ್ರೀಮತಿ ಆದಿಲಕ್ಷ್ಮಿ, ವಿವಿವಿ ಸತ್ಯನಾರಾಯಣ ಮತ್ತು ಶ್ರೀಮತಿ ಶ್ರೀದೇವಿ ಶ್ರೀನಿವಾಸ ರಾಜು ಹಾಗೂ ಸಹ ಕುಟುಂಬದವರು  ಸೇವಾಕರ್ತರಾಗಿದ್ದಾರೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಪ್ರಕಾಶ್ ಪಾಟೀಲ್ ವಿವರಿಸಿದ್ದಾರೆ.

error: Content is protected !!