ಮಹಾನಗರ ಪಾಲಿಕೆ, ಕನ್ನಡ ಪರ ಸಂಘ-ಸಂಸ್ಥೆಗಳು ಮತ್ತು ಪತ್ರಕರ್ತರ ಸಂಯು ಕ್ತಾಶ್ರಯದಲ್ಲಿ ಮಹಾ ನಗರಪಾಲಿಕೆ ಆವರಣದ ರಾಧಮ್ಮ ಚನ್ನಗಿರಿ ರಂಗಪ್ಪ ಸ್ಮಾರಕ ರಂಗಮಂದಿರದಲ್ಲಿ ಇಂದು 69ನೇ ಕನ್ನಡ ರಾಜ್ಯೋತ್ಸವ ನಡೆಯಲಿದೆ ಎಂದು ಪಾಲಿಕೆಯ ಮೇಯರ್ ಕೆ. ಚಮನ್‌ಸಾಬ್ ತಿಳಿಸಿದರು.
ಇಂದು ಸಂಜೆ 5.30ರ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜನ್ ಉದ್ಘಾಟಿಸುವರು. ಶಾಸಕ ಶಾಮನೂರು ಶಿವಶಂಕರಪ್ಪ, ದಾನಿಗಳಾದ ಚನ್ನಗಿರಿ ವಿರುಪಾಕ್ಷಪ್ಪ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ, ಡಾ.ಎಂ.ಎಸ್. ಎಲಿ, ರೈತ ಹೋರಾಟಗಾರ ನರಸಿಂಹಪ್ಪ, ನಿವೃತ್ತ ಮುಖ್ಯ ಶಿಕ್ಷಕ ಕೆ.ಇಮಾಂ ಅವರುಗಳಿಗೆ `ನಾಗರಿಕ ಪೌರ ಸನ್ಮಾನ’ ನಡೆಯಲಿದೆ.
ಹಿರಿಯ ಸಾಹಿತಿ ರಂಜಾನ ದರ್ಗಾ ಅವರು ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಶಾಸಕ ಶಿವಗಂಗಾ ಬಸವರಾಜ, ಮಾಜಿ ಸಚಿವ ಎಚ್.ಆಂಜನೇಯ, ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ನಟ ಡಾಲಿ ಧನಂಜಯ, ಕಾನಿಪ ಜಿಲ್ಲಾಧ್ಯಕ್ಷ
ಇ.ಎಂ.ಮಂಜುನಾಥ, ಹಿರಿಯ ಪತ್ರಕರ್ತ ಬಿ.ಎನ್.ಮಲ್ಲೇಶ್, ಕನ್ನಡ ಪರ ಸಂಘಟ ನೆಗಳ ಟಿ. ಶಿವಕುಮಾರ್, ಕೆ.ಜಿ. ಶಿವಕುಮಾರ್, ಜಿ. ಮಂಜುಳಾ ಭಾಗವಹಿಸುವರು.