ಯರಗುಂಟೆ ಸಮೀಪದ ಶ್ರೀ ಗುರು ಕರಿಸಬಸವೇಶ್ವರ ಸ್ವಾಮಿ ಗದ್ದುಗೆ ಮಠದಲ್ಲಿ ಮಹಿಳಾ ರಥೋತ್ಸವದ ಕಾರ್ಯಕ್ರಮಗಳು ಇಂದು ಜರುಗಲಿವೆ ಎಂದು ಶ್ರೀ ಮಠದ ಶ್ರೀ ಪರಮೇಶ್ವರ ಸ್ವಾಮೀಜಿ ತಿಳಿಸಿದರು.
15 ನೇ ವರ್ಷದ ರಥೋತ್ಸವ ಇಂದು ಮಧ್ಯಾಹ್ನ 1 ಗಂಟೆಗೆ ಜರುಗಲಿದೆ. ಇಲ್ಲಿ ಮಹಿಳೆಯರೇ ರಥವನ್ನು ಎಳೆಯುವುದು ವಿಶೇಷವಾಗಿದ್ದು, ರಥೋತ್ಸವದ ಅಂಗವಾಗಿ ನಾಳೆ ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಬೆಳಿಗ್ಗೆ 5 ಕ್ಕೆ ಶ್ರೀ ವಿನಾಯಕಸ್ವಾಮಿ ಪೂಜೆ, ಧ್ವಜಾರೋಹಣ, 6 ಕ್ಕೆ ನವಗ್ರಹ ಪೂಜೆ, ರುದ್ರಹೋಮ,ಗೋಪೂಜೆ, ನಂತರ ಮಹಾಪ್ರಸಾದ ನಡೆಯಲಿದೆ.
ಇಂದು ಬೆಳಿಗ್ಗೆ 6 ಕ್ಕೆ ವೀರಭದ್ರಸ್ವಾಮಿ ಗುಗ್ಗುಳ ನಡೆಯಲಿದೆ. ಬೆಳಿಗ್ಗೆ 10 ಕ್ಕೆ ಧರ್ಮ ಜಾಗೃತಿ ಸಮಾರಂಭ ಜರುಗ ಲಿದೆ. ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗ ವತ್ಪಾದರು ಸಾನ್ನಿಧ್ಯ ವಹಿಸುವರು. ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಡಾ. ಬಸವ ಜಯ ಚಂದ್ರ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀ ಶರು ಆಗಮಿಸಲಿದ್ದಾರೆ.
ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ, ಗಾಯತ್ರಿ ಸಿದ್ದೇಶ್ವರ, ಶಾಸಕ ಬಿ.ಪಿ.ಹರೀಶ್, ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ. ವಿನಯ್ ಕುಮಾರ್, ಹೆಚ್.ಸಿ. ಜಯಮ್ಮ, ಚೇತನಾ ಶಿವಕುಮಾರ್ ಮತ್ತಿತರರು ಭಾಗವಹಿಸಲಿದ್ದಾರೆ.