ದಾವಣಗೆರೆ, ನ. 29- ನಗರದ ಶ್ರೀಮತಿ ಸ್ವಾತಿ ಡಾ|| ಅಜಿತ್ ಈಟಿ ಅವರ ಮನೆಯಲ್ಲಿ ಕನಕ ಭಜನಾ ಮಂಡಳಿ ವತಿಯಿಂದ ಕನಕ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಮತಿ ಗೀತಾ ನಾಗರಾಜ್ ಕನಕದಾಸರ ಜೀವನ ಸಾಧನೆ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಸದಸ್ಯರಾದ ಶ್ರೀಮತಿ ಸಾವಿತ್ರಿ, ಭಾರತಿ, ನಾಗರತ್ನ, ಭಾಗೀರಥಿ, ಶ್ರೀದೇವಿ, ರೇಖಾ, ಕವಿತಾ, ಪ್ರೀತಿ, ಕವಿತಾ, ಶೀಲಾ, ಸರಸ್ವತಿ, ಜಯಶೀಲಾ ಉಪಸ್ಥಿತರಿದ್ದು ಸತ್ಸಂಗ ನಡೆಸಿಕೊಟ್ಟರು.
January 10, 2025