ಮಹಾನಗರ ಪಾಲಿಕೆ, ಕನ್ನಡ ಪರ ಸಂಘ-ಸಂಸ್ಥೆಗಳು ಮತ್ತು ಪತ್ರಕರ್ತರ ಸಂಯು ಕ್ತಾಶ್ರಯದಲ್ಲಿ ಮಹಾ ನಗರಪಾಲಿಕೆ ಆವರಣದ ರಾಧಮ್ಮ ಚನ್ನಗಿರಿ ರಂಗಪ್ಪ ಸ್ಮಾರಕ ರಂಗಮಂದಿರದಲ್ಲಿ ಇಂದಿನಿಂದ ಮೂರು ದಿನ 69ನೇ ಕನ್ನಡ ರಾಜ್ಯೋತ್ಸವ ನಡೆಯಲಿದೆ ಎಂದು ಪಾಲಿಕೆಯ ಮೇಯರ್ ಕೆ. ಚಮನ್ಸಾಬ್ ತಿಳಿಸಿದರು.
ಇಂದು ಬೆಳಿಗ್ಗೆ 9.30ಕ್ಕೆ ಪಾಲಿಕೆ ಆವರಣದಲ್ಲಿ ಮೇಯರ್ ಚಮನ್ ಸಾಬ್ ಕನ್ನಡ ಧ್ವಜಾರೋಹಣ ನೆರವೇರಿಸುವರು. ತದನಂತರ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಭುವನೇಶ್ವರಿ ದೇವಿಯ ಭವ್ಯ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ಶ್ರೀ ಭುವನೇಶ್ವರಿ ಮೆರವಣಿಗೆ ಮಾರ್ಗ : ಮಹಾನಗರ ಪಾಲಿಕೆಯಿಂದ ಆರಂಭಗೊಳ್ಳುವ ಮೆರವಣಿಗೆಯು ಜಯದೇವ ಮುರುಘರಾಜೇಂದ್ರ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಪಿ.ಜೆ. ಬಡಾವಣೆ 4ನೇ ಮುಖ್ಯ ರಸ್ತೆ ಮುಖಾಂತರ ಹರಳೆಣ್ಣೆ ಕೊಟ್ರಬಸಪ್ಪ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಶ್ರೀ ವೀರ ಮದಕರಿ ನಾಯಕ ವೃತ್ತ, ಕೆರೆ ಗರಡಿ ಮನೆ ಮುಂದಿನ ರಸ್ತೆಯಿಂದ ದೊಡ್ಡಪೇಟೆ, ವಿಜಯಲಕ್ಷ್ಮಿ ರಸ್ತೆ, ಗಡಿಯಾರ ಕಂಬ ಮಾರ್ಗವಾಗಿ ಮಹಾನಗರ ಪಾಲಿಕೆ ಆವರಣ ತಲುಪುವುದು.
ಇಂದಿನ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಗೌರವ ಸ್ವೀಕರಿಸಲಿರುವ ಸಾಧಕರು
ಚಿತ್ರಕಲೆ : ಡಾ.ರವೀಂದ್ರ ಎಸ್. ಕಮ್ಮಾರ, ಕು|| ಸ್ನೇಹಾ ಪಿ.,
ಪತ್ರಿಕೋದ್ಯಮ : ಬಾಬು ದಾಮೋದರ, ಟಿ.ಪಿ. ನಾಗರಾಜ್, ನಿಂಗಪ್ಪ, ರಘುರಾಮ್, ಸಿದ್ಧಯ್ಯ ಹಿರೇಮಠ, ಶಿವರಾಜ್ ಬೀದಿಮನಿ, ಬಿ.ಕೆ. ಕಾವ್ಯ, ಶಿವರಾಜ್ ಈಳಿಗೇರ್, ಸಿ. ವೇದಮೂರ್ತಿ, ದೇವಿಕಾ ಸುನಿಲ್, ಸುರೇಶ್ ಕಕ್ಕರಗೊಳ್ಳ, ನೂರುಲ್ಲಾ ಡಿ., ಅಲ್ಲಾಭಕ್ಷಿ,
ಕ್ರೀಡೆ : ರಾಘವೇಂದ್ರ (ಯೋಗಾಸನ), ನಾಗರಾಜ್ ಆರ್. (ಕಬಡ್ಡಿ), ಕುಮಾರ್ ಕೆ. (ಕ್ರಿಕೆಟ್), ಯೂಸುಫ್ ಐ.ಬಿ. (ದೇಹದಾರ್ಢ್ಯ), ರಾಕೇಶ್ ಬಿ. ಜಾಧವ್ (ಕಬಡ್ಡಿ), ಆಕಾಶ್ ಡಿ. (ಕುಸ್ತಿ), ಡಾ.ವಿನೋದಕುಮಾರ್ ಕೆ. (ಕುಸ್ತಿ), ಮೊಹ್ಮದ್ ಫಾರೂಕ್ (ದೇಹದಾರ್ಢ್ಯ), ಕರಿಬಸಪ್ಪ ಬಿ. ವಿ. (ದೇಹದಾರ್ಢ್ಯ ತರಬೇತುದಾರ), ಎ.ಎ. ರೋಹಿತ್ (ಕ್ರಿಕೆಟ್), ವೈಶಾಖ ಸಿ.ಅಗಡಿ (ಕರಾಟೆ), ಶಿಲ್ಪಾ ಕೆ., ಎಸ್. ರಾಜಶೇಖರ್ (ಯೋಗ), ಚಿನ್ಮಯಿ ಎನ್.ಎಂ. (ಕರಾಟೆ), ಆದಿಲ್ ಬಾಷಾ, ಆಲಿಅಕ್ಬರ್ (ಪೈಲ್ವಾನ್).
ಭರತನಾಟ್ಯ : ಆರ್.ಡಿ. ಸ್ನೇಹ ಶಿವರಾಜ್,
ಸಮಾಜ ಸೇವೆ : ಕೆ.ಟಿ.ಜಯಪ್ಪ, ಜಯಚಂದ್ ಜೈನ್, ಡಾ. ಜಿ. ಧನ್ಯಕುಮಾರ್, ಅನಿಲ್ ಬಾರೆಂಗಳ್, ಸೈಯ್ಯದ್ ಖಾಲಿದ್, ಶಹನವಾಜ್ ಚಿತ್ತೇವಾಲೆ, ಲಿಯಾಖತ್ ಅಲಿ ಎಂ.ಕೆ., ಪಿ. ಖಾಸಿಂಸಾಬ್, ಮಹ್ಮದ್ ಜಿಕ್ರಿಯಾ, ಶಂಕರ್ ಎ. ಶಿರೇಕರ್ ಪವಾರ್, ಮಹಾದೇವಮ್ಮ, ಅನಿಲ್ ನಾಯ್ಕ (ಸಾಮಾಜಿಕ ಜಾಗೃತಿ), ಕೆ.ಬಾನಪ್ಪ (ಬೀದಿ ನಾಟಕ), ರಂಗಸ್ವಾಮಿ ಎಸ್. (ಕನ್ನಡ ಪರ ಹೋರಾಟ), ಎಸ್. ಸತೀಶ್, ಡಿ.ಎನ್. ಹಾಲೇಶ್ ನಲ್ಕುದುರೆ, ಮಂಜಮ್ಮ (ಸಫಾಯಿ ಕರ್ಮಚಾರಿ), ಕೆ.ಎಂ. ವೀರಯ್ಯ, ಕೆ.ಜಿ. ರೇವಣಸಿದ್ದಪ್ಪ, ಜಿತೇಂದ್ರ ಕುಮಾರ್ (ಗೋಶಾಲೆ ಸಮಾಜ ಸೇವೆ), ದುಗ್ಗಪ್ಪ, ಸಂಪಿಗೆ ನಾರಾಯಣರಾವ್, ಎನ್. ರುದ್ರಪ್ಪ (ಪರಿಸರ ಸೇವೆ),
ವೈದ್ಯಕೀಯ : ಡಾ|| ಮಲ್ಲಿಕಾರ್ಜುನ್ ಎ.ಎಂ. ಅಜ್ಜಂಪುರ,
ಸಾಂಸ್ಕೃತಿಕ : ಜೆ. ಪರಮೇಶ್ವರಪ್ಪ ಕತ್ತಿಗೆ (ಜನಪದ), ಎನ್.ಟಿ. ಮಂಜುನಾಥ್ (ರಂಗಭೂಮಿ), ದಾದಾಪೀರ್ ನವಿಲೇ ಹಾಳ್ (ಸಾಹಿತ್ಯ), ಟಿ.ಎಸ್. ಶೈಲಜ (ಸಾಹಿತ್ಯ), ಮಹಾಂತೇಶ್ ಬಿ. ನಿಟ್ಟೂರ್ (ಸಾಹಿತ್ಯ), ಡಾ. ಗಂಗಾಧರಯ್ಯ ಹಿರೇಮಠ (ಸಾಹಿತ್ಯ), ಆನಂದಗೌಡ ಪಾಟೀಲ್ (ಸಂಗೀತ), ಮಂಗಳಗೌರಿ (ಸಂಗೀತ), ರೇವಣಸಿದ್ದಪ್ಪ ಜಿ.ಆರ್. (ಸಾಹಿತ್ಯ), ವರುಣ್ ವಿ. ಗೌಡ (ಸಂಗೀತ), ವೀಣಾ ಕೃಷ್ಣಮೂರ್ತಿ (ಸಾಹಿತ್ಯ), ಕಮಲಮ್ಮ (ರಂಗಭೂಮಿ), ಹೆಚ್. ಶಶಿಧರ್ (ಜನಪದ), ಎಸ್. ಕೋಟೇಶ್ (ಭಜನಾ), ಸಂತೋಷ್ ಕುಮಾರ್ ಎಸ್. (ಶಿಲ್ಪಕಲೆ), ಸಾವಿತ್ರಮ್ಮ ಬಿ. (ರಂಗಭೂಮಿ), ಬಿ.ಪಿ. ಯಮನೂರು ಸಾಬ್ (ರಂಗಭೂಮಿ), ಅರುಣ್ ಕುಮಾರ್ (ನೃತ್ಯ ಕಲಾವಿದ), ಎಸ್. ಓಂಕಾರಯ್ಯ (ಸಾಹಿತ್ಯ), ಶಿವರುದ್ರಾಚಾರ್ (ಸಂಗೀತ).
ಶಿಕ್ಷಣ : ಅಕ್ಕಮಹಾದೇವಿ ಕೆ.ಎಂ., ಸೌಮ್ಯ ಎಸ್. (ಲೇಖಕರು),
ದೇಶಪ್ರೇಮ : ಸುರೇಶ್ರಾವ್ ಹೆಚ್. (ಸೈನಿಕ),
ಕಲೆ : ಬಡಿಗೇರ ವೀರಭದ್ರಪ್ಪ (ಮರ ಕೆತ್ತನೆ)
ಪಾಲಿಕೆ ಆಯುಕ್ತರಾದ ರೇಣುಕಾ, ಉಪಮೇಯರ್ ಸೋಗಿ ಶಾಂತಕುಮಾರ್, ಸಮರ್ಥ ಶಾಮನೂರು, ವಿಶ್ವಪರ್ಯಟನಾಗಾರ ಮಹಮ್ಮಸ್ ಸಿನಾನ್ ಸೇರಿದಂತೆ ಗಣ್ಯರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.
ನಂತರ ಸಂಜೆ 5.30ಕ್ಕೆ ರಾಜ್ಯೋತ್ಸವ ಸಮಾರಂಭ ನಡೆಯಲಿದ್ದು, ಶಾಸಕ ಶಾಮನೂರು ಶಿವಶಂಕರಪ್ಪ ಉದ್ಘಾಟಿಸುವರು. ಹೆಬ್ಬಾಳು ವಿರಕ್ತ ಮಠದ ಮಹಾಂತ ರುದ್ರೇಶ್ವರ ಶ್ರೀಗಳು, ಇಸ್ಲಾಂ ಗುರುಗಳಾದ ಜೈನೀ ಕಾಮೀಲ್ ಸಖಾಫಿ ಮತ್ತು ಕ್ರೈಸ್ತ ಧರ್ಮದ ಗುರುಗಳಾದ ಆಂಟೋನಿ ನಜರತ್ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಉಪನ್ಯಾಸ ನೀಡಲಿದ್ದು, ಶಾಸಕ ಕೆ.ಎಸ್. ಬಸವಂತಪ್ಪ, ಸೋಗಿ ಶಾಂತಕುಮಾರ್, ಸುರೇಶ್ ಬಿ. ಇಟ್ನಾಳ್ ಸೇರಿದಂತೆ ಗಣ್ಯರು ಭಾಗವಹಿಸುವರು.
ಸಭಾ ಕಾರ್ಯಕ್ರಮದ ಬಳಿಕ ರಾತ್ರಿ 8ಕ್ಕೆ ಹಾಸ್ಯ ನಟ ಸಾಧು ಕೋಕಿಲ ಮತ್ತು ಗಿಚ್ಚಿಗಿಲಿಗಿಲಿ ತಂಡದ ಗೊಬ್ರಗಾಲ ಮಂಜು ಅವರಿಂದ ಮನರಂಜನೆ ಕಾರ್ಯಕ್ರಮ ನಡೆಯಲಿದೆ.