ರಾಮಕೃಷ್ಣ ಶಾಲೆಯಲ್ಲಿ ರಾಜ್ಯೋತ್ಸವ

ರಾಮಕೃಷ್ಣ ಶಾಲೆಯಲ್ಲಿ ರಾಜ್ಯೋತ್ಸವ

ದಾವಣಗೆರೆ, ನ.25- ಇಲ್ಲಿನ ರಾಮಕೃಷ್ಣ ಇಂಟರ್‌ ನ್ಯಾಷನಲ್‌ ಶಾಲೆಯಲ್ಲಿ ಈಚೆಗೆ 69ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಈ ವೇಳೆ ಶಾಲೆಯ ಕಾರ್ಯದರ್ಶಿ ವಿಜಯಕುಮಾರ್‌ ಮಾತನಾಡಿ,  ಸಾಹಿತ್ಯ, ಕಲೆ ಹಾಗೂ ಸಾಂಸ್ಕೃತಿಕ ಸೊಬಗಿನಿಂದ ಕನ್ನಡ ನಾಡು ಕಂಗೊಳಿಸುತ್ತಿದ್ದು, ಇದಕ್ಕೂ ಮಿಗಿಲಾಗಿ ಸಾಧು, ಸಂತರು ಹಾಗೂ ಶರಣರ ಪಾದ ಸ್ಪರ್ಶ ಈ ಕರುನಾಡಿಗಿರುವುದು ನಮ್ಮೆಲ್ಲರ ಹೆಮ್ಮೆ ಎಂದು ಹೇಳಿದರು.

ಕನ್ನಡಾಂಬೆಯ ವೇಷ ಧರಿಸಿ ಶಾಲಾ ಮಕ್ಕಳು ಎಲ್ಲರನ್ನು ಆಕರ್ಷಿಸಿದರು. ಕೆಲವು ವಿದ್ಯಾರ್ಥಿಗಳು ನಾಡಿನ ವೀರ ನಾಯಕರ ವೇಷದಲ್ಲಿ ನೃತ್ಯ ರೂಪಕ ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷ ಕಿರಣ್‌ ಕುಮಾರ್‌, ನಿರ್ದೇಶಕಿ ಸಹನ ವಿಜಯ್ ಕುಮಾರ್‌, ಸ್ನೇಹ ಕಿರಣ್‌, ಮುಖ್ಯ ಶಿಕ್ಷಕ ಡಿ.ಸಿ. ಸುರೇಶ್‌, ಶಿಕ್ಷಕರಾದ ಆಶಾ, ಕರಿಬಸಮ್ಮ, ತನುಶ್ರೀ ಹಾಗೂ ಶಾಲಾ ಸಿಬ್ಬಂದಿ ಇದ್ದರು.

error: Content is protected !!