ಸಂವಿಧಾನ ಪವಿತ್ರವಾದ ಮಹಾಗ್ರಂಥ

ಸಂವಿಧಾನ ಪವಿತ್ರವಾದ ಮಹಾಗ್ರಂಥ

 ಹರಪನಹಳ್ಳಿ : ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ನ್ಯಾ. ಆರ್.ಉಷಾರಾಣಿ

ಹರಪನಹಳ್ಳಿ,ನ.27-  ಮೂಲಭೂತ ಹಕ್ಕುಗಳು ಮತ್ತು ಮೂಲಭೂತ ಕರ್ತವ್ಯಗಳನ್ನು ಹೊಂದಿರುವ ನಮ್ಮ ಸಂವಿಧಾನ  ಇಡೀ ಜಗತ್ತಿನಲ್ಲಿಯೇ ಬೃಹತ್ ಮತ್ತು ಲಿಖಿತ      ಸಂವಿಧಾನವಾಗಿದೆ  ಎಂದು  ಹಿರಿಯ ಸಿವಿಲ್ ನ್ಯಾಯಾ ಧೀಶರಾದ  ಆರ್.ಉಷಾರಾಣಿ  ಹೇಳಿದರು.

ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದಲ್ಲಿ ಆಯೋಜಿ ಸಲಾಗಿದ್ದ ಭಾರತೀಯ ಸಂವಿಧಾನ ದಿನಾಚರಣೆಯ ಕಾರ್ಯಕ್ರಮವನ್ನು  ಉದ್ಘಾಟಿಸಿ ಅವರು ಮಾತನಾಡಿದರು. 

ನಮ್ಮ ದೇಶದ ಸಂವಿಧಾನ ಪವಿತ್ರವಾದ ಮಹಾಗ್ರಂಥ ವಾಗಿದ್ದು,  ಅನೇಕ  ಭಾಷೆ, ಕಲೆ, ಸಂಸ್ಕೃತಿಗಳನ್ನು  ಹೊಂದಿರುವ ಈ ಸಂವಿಧಾನದ ಮಹತ್ವವನ್ನು ಪ್ರತಿಯೊಬ್ಬರೂ ತಿಳಿದು ಕೊಂಡಾಗ ಮಾತ್ರ ಸಂವಿಧಾನದ ಮಹತ್ವ ಉಳಿಯುವುದಕ್ಕೆ ಸಾಧ್ಯವಾಗುತ್ತದೆ ಎಂದರು.

ಸಿವಿಲ್ ನ್ಯಾಯಾಧೀಶರಾದ ಎಸ್.ಪಿ. ಮನುಶರ್ಮ  ಮಾತನಾಡಿ, ಡಿ.14 ರಂದು ರಾಷ್ಟ್ರೀಯ ಲೋಕ ಅದಾಲತ್  ನಡೆಯಲಿದ್ದು, ರಾಜೀ ಆಗುವಂತಹ ಪ್ರಕರಣ ಗಳನ್ನು ವಕೀಲರು  ಕಕ್ಷಿದಾರರ ಮನವೊಲಿಸಿ ರಾಜೀ ಮಾಡುವುದಕ್ಕೆ ಪ್ರಯತ್ನ ಮಾಡಬೇಕು ಎಂದು ವಕೀಲರಿಗೆ ತಿಳಿಸಿದರು.

ವಕೀಲರ ಸಂಘದ ಅಧ್ಯಕ್ಷ  ರಾಮನಗೌಡ ಪಾಟೀಲ್ ಮಾತನಾಡಿ, ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ತಿಳಿಸಲಾಗಿದ್ದು, ಮೂಲಭೂತ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಸಿ.ಪೀರ್ ಅಹ್ಮದ್, ಕಾರ್ಯದರ್ಶಿ  ಕೇಶವಮೂರ್ತಿ ಹೆಚ್.ಎಂ. ತಾಲೂಕು ಕಾನೂನು ಸೇವಾ ಸಮಿತಿಯ ಸಿಬ್ಬಂದಿ ವರ್ಗದ  ಬಾಗಳಿ ಕೊಟ್ರೇಶ್, ಬಸವರಾಜ್, ಸೇರಿದಂತೆ ಮತ್ತು ಇತರರು ಹಾಜರಿದ್ದರು.

error: Content is protected !!