ನಗರದ ಮಹಾರಾಜ ಪೇಟೆ ವಿಠ್ಠಲ ಮಂದಿರದಲ್ಲಿ ಇಂದಿನಿಂದ ದಿಂಡಿ ಉತ್ಸವ

ನಗರದ ಮಹಾರಾಜ ಪೇಟೆ ವಿಠ್ಠಲ ಮಂದಿರದಲ್ಲಿ ಇಂದಿನಿಂದ ದಿಂಡಿ ಉತ್ಸವ

ಮಹಾರಾಜ ಪೇಟೆ ವಿಠ್ಠಲ ಮಂದಿರ ದಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಶ್ರೀ ವಿಠ್ಠಲ ರುಖುಮಾಯಿ ದೇವರ ಮತ್ತು ಶ್ರೀ ಸಂತ ಜ್ಞಾನೇಶ್ವರ ಮಹಾರಾಜ ಸಂಜೀವಿನಿ ಸಮಾಧಿ ಸೋಹಳ ಮಹೋತ್ಸವ ನಡೆಯಲಿದ್ದು, ಇಂದು  ಸಂಜೆ 5ಕ್ಕೆ ಪೋತಿ ಸ್ಥಾಪನೆ, ನಗರ ಪ್ರದಕ್ಷಿಣೆ, ಧ್ವಜ ಪೂಜೆ, ರಾತ್ರಿ 8 ಕ್ಕೆ ಸುನಿಲ್ ಜಮಖಂಡಿ ಕೀರ್ತನೆ, ಅಖಂಡ ವೀಣಾ ಜಾಗರಣೆ ಇರುತ್ತದೆ.

ನಾಳೆ ಮಂಗಳವಾರ ಏಕಾದಶಿ, ಬೆಳಿಗ್ಗೆ ಅಭಿಷೇಕ ಕಾಕಡಾರತಿ ಭಜನೆ.  7ಕ್ಕೆ ಶ್ರೀ  ಜ್ಞಾನೇಶ್ವರ (ಭಗವದ್ಗೀತೆ) ಪಾರಾಯಣ 9 ಮತ್ತು 12 ನೇ ಅಧ್ಯಾಯ ನಂತರ ನಾಮಜಪ ಪ್ರವಚನದ ನಂತರ  ಭಾವಸಾರ ವಿಜನ್ ಇವರಿಂದ ಭಜನೆ. ಸಂಜೆ 5 ಕ್ಕೆ ರುಖುಮಾಯಿ ಮಹಿಳಾ ಮಂಡಳಿ ಭಜನಾ ಕಾರ್ಯಕ್ರಮ. 6 ಕ್ಕೆ ರಥೋತ್ಸವ, ಶೋಭಾಯಾತ್ರೆ, ಭಜನೆಯೊಂದಿಗೆ ತರುಣ ಮಂಡಳ ಸ್ಟ್ಯಾಬ್ಲೋ ಇರುತ್ತದೆ. ರಾತ್ರಿ 10 ಕ್ಕೆ ಕೀರ್ತನೆ ಪ್ರಭಾಕರ್ ದಾದಾ ಬುವಾ ಬೋಧಲೆ ಮಹಾರಾಜ ಸಾ|| ಪಂಡರಪುರ ಇವರಿಂದ ರಾತ್ರಿ 12 ಕ್ಕೆ ಭಾರೂಢ ಅಖಂಡ ವೀಣಾ ಜಾಗರಣೆ.

ದಿನಾಂಕ 27 ರ ಬುಧವಾರ ದ್ವಾದಶಿ ನಿಮಿತ್ತ್ಯ ಬೆಳಿಗ್ಗೆ 05ಕ್ಕೆ ಕಾಕಡಾರತಿ, ಭಜನೆ, ಪಾರಾಯಣ, ಹರಿಪಾಠ, 9 ಕ್ಕೆ ರಥೋತ್ಸವ, ದಿಂಡಿ ಉತ್ಸವ, 12 ಕ್ಕೆ ಶ್ರೀ ಸಂತ ಪೂಜಾ, 12.30 ಕ್ಕೆ ಕಲಾವತಿ ಮಹಿಳಾ ಮಂಡಳಿ ಇವರಿಂದ ಪಾವುಲ್ ಭಜನೆ, ಮಹಾಮಂಗಳಾರತಿ 1.15 ಕ್ಕೆ ಅಭಿನಂದನಾ ಕಾರ್ಯಕ್ರಮ, ಶ್ರೀ ಸಂತ ಸಮಾರಾಧನೆ.

ದಿನಾಂಕ 28 ರ ಗುರುವಾರ ತ್ರಯೋದಶಿ ಶ್ರೀ ಜ್ಞಾನೇಶ್ವರಿ ಮಹಾರಾಜ ಸಮಾಧಿ ಸೋಹಳ ಕಾರ್ಯಕ್ರಮ, ಬೆಳಗ್ಗೆ 10 ಕ್ಕೆ ಶ್ರೀ ಪ್ರಭಾಕರ್ ಬುವಾ ಬೋಧಲೆ ಮಹಾರಾಜ್ ಇವರಿಂದ ಗುಲಾಲ್ ಕೀರ್ತನೆ, ಮಧ್ಯಾಹ್ನ 12:30 ಕ್ಕೆ ಗುಲಾಲ್‌ ಪುಷ್ಪವೃಷ್ಟಿ ಶ್ರೀ ಸಂತ ಸಮಾರಾಧನೆ ಯೊಂದಿಗೆ ಕಾರ್ಯಕ್ರಮ ಮುಕ್ತಾವಾಗಲಿದೆ.

ಭಕ್ತಾದಿಗಳು ಭಾಗವಹಿಸುವಂತೆ ದೈವ ಮಂಡಳಿ ಅಧ್ಯಕ್ಷ ಎಂ.ಎನ್. ರಘು ಮುಸಳೆ, ಕಾರ್ಯದರ್ಶಿ ಈಶ್ವರ್ ರಾವ್ ಎನ್. ಗುಜ್ಜರ್, ಭಜನಾ ಮಂಡಳಿ ಪ್ರಮುಖರಾದ ಚಂದ್ರಕಾಂತ ಎಸ್. ವಾದೋನಿ, ವಿನಯ್ ಜಿಂಗಾಡೆ, ಭಜನಾ ಮಂಡಳಿ ಅಧ್ಯಕ್ಷ ನಿಂಗಸ್ವಾಮಿ ರಾವ್ ಖಮಿತ್ಕರ್ ಕೋರಿದ್ದಾರೆ.

error: Content is protected !!