ಮಲೇಬೆನ್ನೂರು, ನ. 23 – ಶ್ರೀನಿವಾಸನಗರ ಕ್ಯಾಂಪ್‌ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಶನಿವಾರ ಬೆಂಗಳೂರಿನ ಉದ್ಯಮಿ ಶ್ರೀಮತಿ ಸಾವಿತ್ರಮ್ಮ ಮಂಜುನಾಥ್ ಇವರು ಶಾಲಾ ಬ್ಯಾಗ್ ಹಾಗೂ ನೋಟ್ ಪುಸ್ತಕಗಳನ್ನು ವಿತರಿಸಿದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷ ಅಂಜನಪ್ಪ, ಉಪಾಧ್ಯಕ್ಷ ಪಾಲಾಕ್ಷಪ್ಪ, ಸದಸ್ಯ ಗಣೇಶ್, ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾ, ಅಧ್ಯಕ್ಷ ಕೆ.ಟಿ. ಮಂಜಪ್ಪ , ಶಾಲೆಯ ಮುಖ್ಯ ಶಿಕ್ಷಕ ಮಹಮದ್ ಹಾರೂನ್, ಸಹ ಶಿಕ್ಷಕ ನೂರುಲ್ಲಾ, ಶ್ರೀ ಲಕ್ಷ್ಮಿ ವೆಂಕಟೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಂಜುನಾಥ್ ಕಡೇಮನಿ, ಕೆ.ಆರ್. ದಿವಾಕರ್ ಭಾಗವಹಿಸಿದ್ದರು.
January 10, 2025