ಹರಿಹರ : ಪ್ರೊ. ಎಸ್ಸೆಚ್ ಭಿಕ್ಷಾವರ್ತಿಮಠ ಅವರ `ವಚನ ಸ್ಪಂದನ’ ಕೃತಿ ಬಿಡುಗಡೆ

ಹರಿಹರ : ಪ್ರೊ. ಎಸ್ಸೆಚ್ ಭಿಕ್ಷಾವರ್ತಿಮಠ  ಅವರ `ವಚನ ಸ್ಪಂದನ’ ಕೃತಿ ಬಿಡುಗಡೆ

ಹರಿಹರ,ನ.24- ಕನ್ನಡ ನಾಡು- ನುಡಿ, ನೆಲ-ಜಲಕ್ಕೆ ಸಂಬಂಧಿಸಿದ ಕಾರ್ಯಕ್ರಮಕ್ಕೆ ಸಾರ್ವಜನಿಕರ ಪ್ರೋತ್ಸಾಹ ಮತ್ತು ಪಾಲ್ಗೊಳ್ಳುವಿಕೆ ಹೆಚ್ಚಾದಷ್ಟು ಕನ್ನಡ ಸಮಾರಂಭಗಳು ಯಶಸ್ವಿಯಾ ಗುತ್ತವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ವಾಮದೇವಪ್ಪ ಅಭಿಪ್ರಾಯಪಟ್ಟರು.

ನಗರದ ತಿಪ್ಪೇರುದ್ರಸ್ವಾಮಿ ಪ್ರೌಢಶಾಲಾ ಆವರಣದಲ್ಲಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಸ್.ಹೆಚ್. ಭಿಕ್ಷಾವರ್ತಿಮಠ ಅವರ `ವಚನ ಸ್ಪಂದನ’ ಕೃತಿ ಬಿಡುಗಡೆ, ಅಭಿನಂದನೆ ಹಾಗೂ ಪರಸ್ಪರ ಸ್ನೇಹ-ಸಮ್ಮಿಲನ ಸಮಾರಂಭದಲ್ಲಿ ಅವರು ಮಾತನಾಡಿದರು.

ಮೊಬೈಲ್, ಲ್ಯಾಪ್ ಟಾಪ್ ಸೇರಿದಂತೆ ಇತರೆ ತಾಂತ್ರಿಕತೆ ವ್ಯವಸ್ಥೆಗಳು ಬಂದಾಗಿನಿಂದ ಓದುಗರ ಕೊರತೆ ಕಂಡು ಬರುತ್ತಿದೆ. ಓಓಡಿ ಸೇರಿದಂತೆ ಹಲವು ಬಗೆಯ ಸೌಲಭ್ಯಗಳನ್ನು ಒದಗಿಸಿದರೂ ಸಹ ಕನ್ನಡದ ಕಾರ್ಯಕ್ರಮದಲ್ಲಿ ಜನರು ಪಾಲ್ಗೊಳ್ಳವುದು ಹಾಗೂ ಪ್ರೋತ್ಸಾಹ ನೀಡುವುದು ಕಡಿಮೆಯಾಗುತ್ತಾ ಸಾಗಿರುವುದು ವಿಷಾದದ ಸಂಗತಿ ಎಂದರು.

ಪ್ರೊ. ಎಸ್.ಹೆಚ್.ಭಿಕ್ಷಾವರ್ತಿಮಠ ಪ್ರಾಸ್ತಾ ವಿಕವಾಗಿ ಮಾತನಾಡಿ,  ಹರಿಹರ ನಗರದಲ್ಲಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಸದಾ ಕಾಲ ನಡೆಯುವಂತಾಗಬೇಕೆಂಬುದು ನಮ್ಮ ಉದ್ದೇಶವೆಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಎಸ್.ಹೆಚ್. ಹೂಗಾರ್ ಮಾತನಾಡಿ,  ಹಿಂದೆ ಮೂರು ಗಂಟೆ ವೀಕ್ಷಣೆ ಮಾಡುವಂತ ಸಿನಿಮಾ  ಬರುತ್ತಿದ್ದವು. ಆದರೆ ಇತ್ತೀಚೆಗೆ ಸಿನಿಮಾ ರಂಗದಲ್ಲಿ ಕಡಿಮೆ ಅವಧಿಯ ಸಿನಿಮಾ ಬರುತ್ತಿರುವುದು ಕಾಣುತ್ತಿದ್ದೇವೆ. ಕಾರಣ ಇತ್ತೀಚೆಗೆ ಸಮಯಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುವಂತಹ ಕಾಲಘಟ್ಟದಲ್ಲಿ ಇಂದಿನ ಯುವಕರು ಸಾಗುತ್ತಿರು ವುದರಿಂದ ಹೊಸ ಹೊಸ ಕವಿಗಳ ಕೊರತೆಯನ್ನು ಕಾಣುತ್ತೇವೆ. ಅದಕ್ಕೆ ಪೂರಕವಾಗಿ ಎಲ್ಲಾ ಬಗೆಯ ವಿಚಾರಗಳ ಚರ್ಚೆಗಳು ಇಂದಿನ ಸಮಾರಂಭದಲ್ಲಿ ಕಾಣುತ್ತಿದ್ದೇವೆ ಎಂದು  ಹೇಳಿದರು.

ಮಾನ್ಯತಾ ನಾಡಗೌಡ್ರು ಯಾವುದೇ ಪುಸ್ತಕ ಬಿಡುಗಡೆ ಆದರೆ ಅವುಗಳನ್ನು ಕನ್ನಡ
ಸಾಹಿತ್ಯ ಪರಿಷತ್ತಿನ ಅಡಿಯಲ್ಲಿ ಬಿಡುಗಡೆ ಆಗುವಂತಾಗಲಿ. ತಾಲ್ಲೂಕಿಗೊಂದು ಕನ್ನಡ ಭವನ ನಿರ್ಮಾಣ ವಾಗುವಂತೆ ಸರ್ಕಾರ ಚಿಂತನೆ ಮಾಡಬೇಕೆಂದು ಹೇಳಿದರು.

ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿಗಳಾದ ನಿವೃತ್ತ ಪ್ರೊ. ಸಿ.ವಿ. ಪಾಟೀಲ, ಜೆ. ಕಲೀಂಬಾಷಾ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಡಿ.ಎಂ‌ ಮಂಜುನಾಥಯ್ಯ, ಸಾಹಿತಿ ಲಿಂಗರಾಜ್ ಕಮ್ಮಾರ್ ಮಾತನಾಡಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ  ಬಿ. ದಿಳ್ಳೆಪ್ಪ, ಕಾಳಿದಾಸ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಬಿ. ರಾಜಶೇಖರ, ದೂಡಾ ಮಾಜಿ ಸದಸ್ಯ ಹೆಚ್. ನಿಜಗುಣ, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಕಾರ್ಯದರ್ಶಿಗಳಾದ ಬಿ.ಬಿ‌. ರೇವಣ್ಣನಾಯ್ಕ್, ಎಂ. ಚಿದಾನಂದ ಕಂಚಿಕೇರಿ,  ಪರಮೇಶ್ವರಪ್ಪ ಕತ್ತಿಗೆ, ಎ. ರಿಯಾಜ್ ಆಹ್ಮದ್, ವಿ.ಬಿ. ಕೊಟ್ರೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಸಂಘಟನಾ ಕಾರ್ಯದರ್ಶಿ ನಾಗರಾಜ್ ಕೋಡಿಹಳ್ಳಿ,  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಜಗದೀಶ್ ಕೂಲಂಬಿ, ಉಪನ್ಯಾಸಕ, ಶಿವಯೋಗಿ, ಹುಲಿಕಟ್ಟಿ ಚನ್ನಬಸಪ್ಪ,  ಹೆಚ್.ಸಿ. ಕೀರ್ತಿಕುಮಾರ್, ಆರ್.ಮಂಜುನಾಥ್, ಎನ್.ಇ. ಸುರೇಶ್, ಗುರುಬಸವರಾಜ್  ಇತರರು ಹಾಜರಿದ್ದರು.

ಪರಮೇಶ್ವರಪ್ಪ ಕತ್ತಿಗೆ ಪ್ರಾರ್ಥಿಸಿದರು. ಬಿ.ಬಿ. ರೇವಣ್ಣನಾಯ್ಕ್ ಸ್ವಾಗತಿಸಿ, ನಿರೂಪಿಸಿದರು.ವಿ.ಬಿ. ಕೊಟ್ರೇಶ್ ವಂದಿಸಿದರು.

error: Content is protected !!