ದಾವಣಗೆರೆ ವಿವಿಗೆ ಸಿಂಡಿಕೇಟ್ ಸದಸ್ಯರ ನೇಮಕ

ದಾವಣಗೆರೆ ವಿವಿಗೆ ಸಿಂಡಿಕೇಟ್ ಸದಸ್ಯರ ನೇಮಕ

ದಾವಣಗೆರೆ, ನ. 22- ದಾವಣಗೆರೆ ವಿಶ್ವವಿದ್ಯಾಲಯದ  ಸಿಂಡಿಕೇಟ್ ನಾಮ ನಿರ್ದೇಶಿತ ಸದಸ್ಯರನ್ನಾಗಿ ಐವರನ್ನು ನೇಮಿಸಿ ಸರ್ಕಾರ ಇಂದು ಆದೇಶ ಹೊರಡಿಸಿದೆ.

ನಗರದ ಸಿ.ವಿ. ರಾಮನ್ ಕಾಲೇಜಿನ ಡಾ. ಎನ್. ಸಿ. ಪ್ರಶಾಂತ್, ಹರಿಹರದ ಎಸ್.ಜೆ.ವಿ.ಪಿ. ಕಾಲೇಜಿನ ಆರ್.ಟಿ. ಪ್ರಶಾಂತ್, ಸ್ಥಳೀಯ ಉದ್ಯಮಿ ಶಬ್ಬೀರ್ ಅಲಿ ಖಾನ್ ಅವರುಗಳು ದಾವಣಗೆರೆ ವಿವಿ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡಿದ್ದಾರೆ. 

ಅಲ್ಲದೇ, ಜಗಳೂರು ತಾಲ್ಲೂಕು ಬೆಂಚಿಕಟ್ಟೆಯ ದ್ಯಾಮಪ್ಪ, ಹೊಸದುರ್ಗ ತಾಲ್ಲೂಕಿನ ಚಿತ್ತನಯ್ಯನಹಟ್ಟಿ ಡಾ.ಜಿ.ಕೆ. ಪ್ರೇಮ, ಚಳ್ಳಕೆರೆಯ ಹೆಚ್. ತಿಪ್ಪೇಸ್ವಾಮಿ ಅವರುಗಳೂ ಸಹ ಸಿಂಡಿಕೇಟ್ ಸದಸ್ಯರಾಗಿದ್ದಾರೆ.

error: Content is protected !!