ರಾಣೇಬೆನ್ನೂರು, ನ. 22 – ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ನಡೆಯುತ್ತಿರುವ 3ನೇ ಆವೃತ್ತಿಯ ಮಿನಿ ಓಲಂಪಿಕ್ಸ್ ಫುಟ್‌ಬಾಲ್ ಸ್ಪರ್ಧೆಗೆ ನಗರದ ನ್ಯಾಷನಲ್ ಪಬ್ಲಿಕ್ ಶಾಲೆಯ 14 ಮಕ್ಕಳು ಆಯ್ಕೆಯಾಗಿದ್ದಾರೆ.
ಹಾವೇರಿ ಜಿಲ್ಲೆಯ ವತಿಯಿಂದ ವೈಭವಿ ತೆಗ್ಗಿನ, ವರ್ಷಿಣಿ ತೆಗ್ಗಿನ, ನೂತನ ಐರಣಿ, ಪೂರ್ವಿ ಮುತಾಲಿಕ್, ಕಾವ್ಯ ನವಲಗುಂದ, ಸನ್ನಿಧಿ ಎಲ್.ಎಲ್, ಅಲೀನಾ ಆಮ್ರಾ ಬಳೆಗಾರ, ಸುದೀಕ್ಷಾ, ವಿನುತಾ ಕಾಕಿ, ಜುಲೈನ್ ಫಾತಿಮಾ, ದೀಕ್ಷಾ ಅಕ್ಕಿಮಠ, ಪ್ರನನ್ಯ ಅರ್ಕಾಚಾರಿ, ದಿವ್ಯ ಬಿ.ಎಂ, ಮೆಹ್ವಿಶ್ ಡಿ.ಎನ್ ಆಯ್ಕೆಯಾಗಿದ್ದಾರೆ. ದೈಹಿಕ ನಿರ್ದೇಶಕ ಪ್ರವೀಣಕುಮಾರ್ ಸಿ. ಎಂ ತರಬೇತಿ ನೀಡಿದ್ದರು.