ಮಲೇಬೆನ್ನೂರು, ನ. 22- ಬೆಳ್ಳೂಡಿ ಗ್ರಾಮದ ಹಲಸಬಾಳು ಗುಡ್ಡಪ್ಪ ಮತ್ತು ಶಾಂತಮ್ಮನವರ ಪುತ್ರ ಹೆಚ್.ಜಿ. ಪರಶುರಾಮಪ್ಪ ಅವರು `ಅಂಬಿಗರ ಚೌಡಯ್ಯ ಮತ್ತು ಮಡಿವಾಳ ಮಾಚಿದೇವರ ವಚನಗಳಲ್ಲಿ ಸಾಮಾಜಿಕ ಪ್ರಜ್ಞೆ : ತೌಲನಿಕ ಅಧ್ಯಯನ’ ಕುರಿತು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿದೆ.
ಪರಶುರಾಮ್ ಅವರು ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ಹಾ.ಮ. ನಾಗಾರ್ಜುನ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು. ಇವರು ಪ್ರಸ್ತುತ ಶಿವಮೊಗ್ಗ ನಿವಾಸಿಯಾಗಿದ್ದು ಶ್ರೀರಾಂಪುರದ ಸರ್ಕಾರಿ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿದ್ದಾರೆ.