ದಾವಣಗೆರೆ, ನ.21- ನಗರದಲ್ಲಿ ಡಿಸೆಂಬರ್ 15 ರಂದು ನಡೆಯಲಿರುವ ಮಾದಿಗ ಮತ್ತು ಛಲವಾದಿ ಸಮಾಜಗಳ ಸಮಾವೇಶದ ಸ್ವಾಗತ ಸಮಿತಿ ಗೌರವ ಅಧ್ಯಕ್ಷರನ್ನಾಗಿ ನಿವೃತ್ತ ಎಸ್.ಪಿ. ರವಿನಾರಾಯಣ್, ಕಾರ್ಯಾಧ್ಯಕ್ಷರನ್ನಾಗಿ ನಿವೃತ್ತ ಎಸ್.ಪಿ. ರುದ್ರಮುನಿ ಹಾಗೂ ಅಧ್ಯಕ್ಷರಾಗಿ ಬಿ.ಹೆಚ್. ವೀರಭದ್ರಪ್ಪ ಇವರುಗಳನ್ನು ಪ್ರವಾಸಿ ಮಂದಿರದಲ್ಲಿ ನಿನ್ನೆ ನಡೆದ 3ನೇ ಪೂರ್ವಭಾವಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಮಹಾನಗರಪಾಲಿಕೆಯ ಸದಸ್ಯ ಎಲ್.ಡಿ. ಗೋಣೆಪ್ಪ, ನಿವೃತ್ತ ಆಯುಕ್ತ ಎಸ್. ಶೇಖರಪ್ಪ ಛಲವಾದಿ, ದುರ್ಗೇಶ್ ಗುಡಿಗೇರಿ ವಕೀಲರು, ರಾಮಯ್ಯ ಛಲವಾದಿ, ಮಾದಿಗ ದಂಡೋರ ಸಮಿತಿಯ ಅಧ್ಯಕ್ಷ ಗುಡ್ಡಪ್ಪ, ಹನುಮಂತಪ್ಪ ಡಿ., ಗುರುಮೂರ್ತಿ ಎಂ. ಹರಿಹರ, ನಾಗರಾಜ್ ಭೈರಜ್ಜರ, ಎ. ನಾಗರಾಜಪ್ಪ ಆದಾಪುರ, ಶಿವಮೂರ್ತಿ ಬಿ.ಆರ್., ರಾಕೇಶ್ ಜಿ., ಸುರೇಶ್ ಕುಣೆಬೆಳಕೆರೆ, ಹೆಚ್.ಸಿ. ಶಾಂತಪ್ಪ, ಡಾ. ಜಗನ್ನಾಥ್, ನಿವೃತ್ತ ಡಿ.ಹೆಚ್.ಓ, ಹೆಚ್. ಯಮನೂರು ಗೌಡ್ರು, ಮಲ್ಲಪ್ಪ ಡಿಎಸ್ಎಸ್, ರಾಘವೇಂದ್ರ ಡಿ. ಕಡೆಮನಿ, ಜಿ.ಎಸ್. ಲೋಕೇಶ್, ಎ.ಕೆ. ಭೀಮಪ್ಪ, ಲಿಂಗರಾಜ್ ಎಂ., ನಿಂಗಪ್ಪ ಬಿ, ಭೀಮ್ ಆರ್ಮಿ ಮಂಜುನಾಥ್ ಬಿ.ಆರ್., ನಿರಂಜನ, ಶಂಕರ್ ಎನ್. ಮತ್ತಿತರರು ಹಾಜರಿದ್ದರು.