ರಾಣೇಬೆನ್ನೂರು, ನ.21- ಇಲ್ಲಿನ ದೇವಾಂಗ ಸೇವಾ ಸಂಘ, ಮಹಿಳಾ ಸಂಘ, ಯುವಕ ಸಂಘ ಹಾಗೂ ನೌಕರರ ಸಂಘದ ವತಿಯಿಂದ ಪರಮೇಶ್ವರನ ಪಾಲನೇತ್ರದಿಂದ ಅವತರಿಸಿ ದೇವ, ಮಾನವರ ಮಾನ ರಕ್ಷಣೆಗೆ ವಸ್ತ್ರ ಸೂತ್ರ ನೀಡಿದ ದೇವಲ ಮಹರ್ಷಿ ಜಯಂತಿ ಆಚರಿಸಲಾಯಿತು.
ಇಲ್ಲಿನ ಕುದುರೆ ಗಲ್ಲಿಯ ಶ್ರೀ ಬನಶಂಕರಿ ದೇವಿ ದೇವಸ್ಥಾನದಲ್ಲಿ ಶ್ರೀ ಷಣ್ಮುಖ ಸ್ವಾಮಿ ದೇವಾಂಗ ಮಠ ಅವರಿಂದ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ದೇವಲ ಮಹರ್ಷಿ ಭಾವ ಚಿತ್ರದ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಕುರುಬಗೇರಿ, ಎಂ.ಜಿ.ರಸ್ತೆ, ದೊಡ್ಡಪೇಟೆ ಮೂಲಕ ಕುಂಬಾರಗಲ್ಲಿಯ ಶ್ರೀ ರಾಮಲಿಂಗ ಮಠಕ್ಕೆ ಆಗಮಿಸಿ ವಿಶೇಷ ಪೂಜೆ ನಂತರ ಮಹಿಳೆಯರಿಗೆ ವಸ್ತ್ರದಾನ ಹಾಗೂ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.
ಸಮಾಜದ ಮುಖಂಡರಾದ ಬಸವರಾಜ ಲಕ್ಷ್ಮೇಶ್ವರ, ಡಾ. ಬಸವರಾಜ ಕೇಲಗಾರ, ಅಶೋಕ ದುರ್ಗದಸೀಮಿ, ಸಂಕಪ್ಪ ಮಾರನಾಳ, ಲಕ್ಷ್ಮಿಕಾಂತ ಹುಲಗೂರ, ಗಣೇಶ ಸಿರಗೂರ, ನಾಗರಾಜ ಲಕ್ಷ್ಮೇಶ್ವರ, ಗಿರೀಶ ಗುಳೇದಗುಡ್ಡ, ರಮೇಶ ದುರ್ಗದಸೀಮಿ, ಸತೀಶ ಕೇಲಗಾರ ಹಾಗೂ ಇತರರು ಭಾಗವಹಿಸಿದ್ದರು.