ಹರಪನಹಳ್ಳಿ : ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯ ರಥೋತ್ಸವ – ಜಾತ್ರೆ

ಹರಪನಹಳ್ಳಿ : ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯ ರಥೋತ್ಸವ – ಜಾತ್ರೆ

ಹರಪನಹಳ್ಳಿ, ನ. 21 – ಬರುವ ಡಿಸೆಂಬರ್ 13 ರಿಂದ 16 ರವರಗೆ ನಡೆಯಲಿರುವ ತಾಲ್ಲೂಕಿನ ದೇವರ ತಿಮ್ಮಲಾಪುರ ಗ್ರಾಮದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯ ರಥೋತ್ಸವ ಹಾಗೂ ಜಾತ್ರೆಯಲ್ಲಿ ಯಾವುದೇ ಅವಘಡ ನಡೆಯದಂತೆ ಮುಂಜಾಗ್ರತಾ ಕ್ರಮವನ್ನು ಅನುಸರಿಸಿ ಸ್ವಚ್ಛತೆ  ಕಾಪಾಡಿ ಕೊಳ್ಳುವಂತೆ ಮುಜರಾಯಿ ಇಲಾಖೆ, ಗ್ರಾಮ ಪಂಚಾ ಯತಿ ಹಾಗೂ ಪುರಸಭೆ ಅಧಿಕಾರಿಗಳಿಗೆ ಶಾಸಕರಾದ ಎಂ.ಪಿ. ಲತಾ ಮಲ್ಲಿಕಾರ್ಜುನ್‌ ಸೂಚಿಸಿದರು.

ಜಾತ್ರೆಯ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಕರೆದಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವಕ್ಕೆ ವಿವಿಧ ಜಿಲ್ಲೆಗಳಿಂದ ಸಹಸ್ರಾರು ಭಕ್ತರು ಆಗಮಿಸುತ್ತಾರೆ,  ಜಾತ್ರೆಯ ಸಂದರ್ಭದಲ್ಲಿ ಭಕ್ತರಿಗೆ ಮಾರ್ಗ ದರ್ಶನ ನೀಡುವ ಮೂಲಕ ಸಂಚಾರ ವ್ಯವಸ್ಥೆ ಹಾಗೂ ಸ್ವಚ್ಛತೆ ಕಾಪಾಡಬೇಕು ಎಂದರು.

ದೇವಸ್ಥಾನದ ಸಮುದಾಯ ಭವನದಿಂದ ಬರುವ ತ್ಯಾಜ್ಯ ನೀರು ಗ್ರಾಮದಲ್ಲಿ ಬಂದು ದುರ್ವಾಸನೆ ಬೀರುತ್ತದೆ.  ಹಾಗಾಗಿ  ಕೇಸಿಂಗ್ ಪೈಪ್ ಮುಂಖಾಂತರ ಚರಂಡಿಗೆ  ಸಂಪರ್ಕವನ್ನು ಕಲ್ಪಿಸುವಂತೆ  ಮುಜರಾಯಿ ಅಧಿಕಾರಿಗಳಿಗೆ ಸೂಚಿಸಿದರು.

ತಹಶೀಲ್ದಾರ್‌ ಗಿರೀಶಬಾಬು ಮಾತನಾಡಿ,  ರಥ ದುರಸ್ತಿ ಇದೆ, ನೂತನ ರಥ ನಿರ್ಮಾಣ ಮಾಡುವಂತೆ ಗ್ರಾಮದ ಮುಖಂಡರು ಮನವಿ ಮಾಡಿದ್ದು ಮುಜರಾಯಿ ಇಲಾಖೆಯ ಆದೇಶದಂತೆ ಇಲ್ಲಿನ ದೇವಸ್ಥಾನದ ಆದಾ ಯವನ್ನು ಇದೇ ದೇವಸ್ಥಾನಕ್ಕೆ ಬಳಕೆ ಮಾಡಲಾಗುತ್ತದೆ. ಹಾಗಾಗಿ ನೂತನ ರಥವನ್ನು ನಿರ್ಮಸಲಿಕ್ಕೆ ಹೆಚ್ಚಿನ ಹಣ ನಮ್ಮ ದೇವಸ್ಥಾನದಲ್ಲಿ ಇಲ್ಲ. ಜಾತ್ರೆಯ ಸಂದರ್ಭದಲ್ಲಿ ನೂತನ ರಥವನ್ನು ನಿರ್ಮಿಸಲು ಭಕ್ತರಿಂದ ದೇಣಿಗೆಯನ್ನು ಸಂಗ್ರಹಿಸಿ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಧರ್ಮಕರ್ತರಾದ ಡಾ. ಹರ್ಷ ಕಟ್ಟಿ, ದಂಡಿನ ಹರೀಶ್  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ,  ಅಡವಿಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಅನು ನಾಗರಾಜ, ಸದಸ್ಯ ಪ್ರಸನ್ನ ಪೂಜಾರ, ರಮೇಶ್, ರೇಣುಕಾ, ಮಂಜುನಾಥ, ಅರ್ಚಕ ಶ್ರೀನಿವಾಸ ಪೂಜಾರಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

error: Content is protected !!