ದಾವಣಗೆರೆ, ನ. 20 – ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ರವರ ಜನ್ಮ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಬೇಕು ಎಂದು ನೆಹರೂರವರ ಆಸೆಯಗಿತ್ತು. ಅದರಂತೆ ಅವರ ಜನ್ಮ ದಿನವನ್ನು ಮಕ್ಕಳ ದಿನಾಚರಣೆಯ ಪ್ರಯುಕ್ತ ಜವಾಹರ್ ಬಾಲ್ ಮಂಚ್ ಜಿಲ್ಲಾ ಸಮಿತಿಯಿಂದ ಅರ್ಥಪೂರ್ಣ ಆಚರಣೆಯನ್ನು ಮಾಡಲಾಗಿದೆ ಎಂದು ದುಡಾ ಅಧ್ಯಕ್ಷ ದಿನೇಶ್. ಕೆ. ಶೆಟ್ಟಿ ಹೇಳಿದರು.
ಇಂದು ಮಕ್ಕಳ ದಿನಾಚರಣೆಯ ಅಂಗವಾಗಿ ಜವಾಹರ್ ಬಾಲ್ ಮಂಚ್ ವತಿಯಿಂದ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನೆಹರೂ ರವರು ಭಾರತದ ಮುಂದಿನ ಭವಿಷ್ಯ, ಇಂದಿನ ಮಕ್ಕಳ ಕೈಯ್ಯಲ್ಲಿದೆ ಆದ್ದರಿಂದ ಮಕ್ಕಳನ್ನು ದೇಶದ ಸದೃಢ ಪ್ರಜೆಗಳನ್ನಾಗಿ ಮಾಡುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಅಭಿಪ್ರಾಯ ಪಟ್ಟರು.
ಜವಾಹರ್ ಬಾಲ್ ಮಂಚ್ ಅಧ್ಯಕ್ಷ ಮೊಹಮ್ಮದ್ ಜಿಕ್ರಿಯಾ ಮಾತನಾಡದರು. ವಿಜೇತರಾದ ಮಕ್ಕಳಿಗೆ ಮೇಯರ್ ಚಮನ್ ಸಾಬ್ ಹಾಗೂ ದುಡಾ ಅಧ್ಯಕ್ಷರು ಬಹುಮಾನ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಉಪಮೇಯರ್ ಸೋಗಿ ಶಾಂತ ಕುಮಾರ್ ಬಾಲ್ ಮಂಚ್‌ನ ಉತ್ತರ ವಲಯ ಅಧ್ಯಕ್ಷ ಅಫ್ರಿದಿ, ಜಿಲ್ಲಾ ಪದಾಧಿಕಾರಿಗಳಾದ ಕೆ.ಹೆಚ್. ಪ್ರೇಮ, ಶಿಲ್ಪಾ ಪರಶುರಾಮ್, ಫಯಾಜ್ ಅಹ್ಮದ್, ಕಾಂಗ್ರೆಸ್ ಮುಖಂಡರಾದ ಗಡಿಗುಡಾಳ್ ಮಂಜುನಾಥ, ಸಾಗರ್, ಹನುಮಂತ ಪಾಪಣ್ಣಿ, ಜಬಿವುಲ್ಲಾ, ಹೆಚ್. ಹರೀಶ್, ದಾದಾಪೀರ್ ಹಾಗೂ ಇನ್ನಿತರರು ಭಾಗವಹಿಸಿದ್ದರು.