ಪಟೇಲ್ ಬಡಾವಣೆಯಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಕಾರ್ತಿಕೋತ್ಸವವನ್ನು ಇಂದು ಸಂಜೆ 6 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಬಸವರಾಜ್ ಪಟೇಲ್ ತಿಳಿಸಿದರು.
ಇಂದು ಬೆಳಿಗ್ಗೆ ಪ್ರಧಾನ ಅರ್ಚಕ ಕುಮಾರ ಸ್ವಾಮಿ ನೇತೃತ್ವದಲ್ಲಿ ಶ್ರೀ ಸಾಯಿಬಾಬಾ, ಶ್ರೀ ಸಿದ್ದಿವಿನಾಯಕ, ಶ್ರೀ ಕಾಶಿ ವಿಶ್ವನಾಥ, ಶ್ರೀ ಬಸವಣ್ಣ ಹಾಗೂ ನವಗ್ರಹ ದೇವತಾ ಸ್ವಾಮಿಗೆ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ಸೇರಿದಂತೆ ವಿಶೇಷ ಪೂಜಾ ಕಾರ್ಯಗಳು ನಡೆದು, ಸಂಜೆ 6 ಗಂಟೆಗೆ ಕಾರ್ತಿಕೋತ್ಸವ, ಮಹಾಮಂಗಳಾರತಿ ನಡೆಯಲಿದೆ.