ನಾಳಿನ ರಾಜ್ಯ ಸಹಕಾರಿ ಸಮಾವೇಶಕ್ಕೆ ಹರಿಹರ ತಾಲ್ಲೂಕಿನಿಂದ ಸಹಕಾರಿಗಳು

ನಾಳಿನ ರಾಜ್ಯ ಸಹಕಾರಿ ಸಮಾವೇಶಕ್ಕೆ ಹರಿಹರ ತಾಲ್ಲೂಕಿನಿಂದ ಸಹಕಾರಿಗಳು

ಜಿಗಳಿ ಇಂದೂಧರ್‌ ಮನವಿ

ಮಲೇಬೆನ್ನೂರು, ನ.20- ದಾವಣಗೆರೆಯಲ್ಲಿ ನಾಳೆ ದಿನಾಂಕ 22ರ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಸಹಕಾರ ಭಾರತಿ, ಕರ್ನಾಟಕ ಇದರ ಆಶ್ರಯದಲ್ಲಿ ಹಮ್ಮಿಕೊಂಡಿರುವ `ರಾಜ್ಯ ಸಹಕಾರಿ ಸಮಾವೇಶ’ಕ್ಕೆ ಹರಿಹರ ತಾಲ್ಲೂಕಿನಿಂದ ಸಹಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಮಾವೇಶದ ಸ್ವಾಗತ ಸಮಿತಿ ಕಾರ್ಯದರ್ಶಿ ಜಿಗಳಿ ಇಂದೂಧರ್‌ ಮನವಿ ಮಾಡಿದ್ದಾರೆ.

ಪಟ್ಟಣದ ನಂದಿ ಸೌಹಾರ್ದ ಸಹಕಾರಿ ಸಂಘದ ಕಛೇರಿಯಲ್ಲಿ ಬುಧವಾರ ಕರೆದಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಈ ಸಮಾವೇಶದಲ್ಲಿ ಸಹಕಾರಿ ಕ್ಷೇತ್ರದ ಬಗ್ಗೆ ಚಿಂತನ-ಮಂಥನ ನಡೆಯಲಿದೆ.

ಸಮಾವೇಶದಲ್ಲಿ ವಿವಿಧ ರೀತಿಯ ಸಹಕಾರ ಸಂಘಗಳ ಸುಮಾರು 2 ಸಾವಿರ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಸಮಾವೇಶದ ಯಶಸ್ಸಿಗಾಗಿ ಸಹಕಾರ ಭಾರತಿ ಅಧ್ಯಕ್ಷರಾದ ರಾಜಶೇಖರ್‌ ಶೀಲವಂತ್‌, ಸಮ್ಮೇಳನದ ಗೌರವಾಧ್ಯಕ್ಷ ಜಿ. ನಂಜನಗೌಡ, ಕಾರ್ಯಾಧ್ಯಕ್ಷ ಎಂ.ಆರ್‌.ಪ್ರಭುದೇವ್‌ ಮತ್ತು ಸ್ವಾಗತ ಸಮಿತಿಯ ಎಲ್ಲಾ ಪದಾಧಿಕಾರಿಗಳು ಶ್ರಮ ವಹಿಸಿದ್ದಾರೆ.

ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಬೆಳಗ್ಗೆ 11ಕ್ಕೆ ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜರುಗುವ ಈ ಸಮಾವೇಶವನ್ನು ಗೋವಿಂದ ಕಾರಜೋಳ ಉದ್ಘಾಟಿಸಲಿದ್ದಾರೆ.

ಸಹಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷ ದೀನನಾಥ್‌, ಠಾಕೂರ್‌ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದು, ಶಾಮನೂರು ಶಿವಶಂಕರಪ್ಪ, ಜಿ.ಎಂ.ಸಿದ್ದೇಶ್ವರ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಲಿದ್ದಾರೆ.

ನಂದಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಗೌಡ್ರ ಬಸವರಾಜಪ್ಪ, ಉಪಾಧ್ಯಕ್ಷ ಕೆ.ಹೆಚ್‌.ಆಂಜನೇಯ ಪಾಟೀಲ್‌, ನಿರ್ದೇಶಕರಾದ ಹೆಚ್‌.ಟಿ. ಪರಮೇಶ್ವರಪ್ಪ, ಹೆಚ್‌. ವೀರನಗೌಡ, ಎಂ.ವಿ.ನಾಗರಾಜ್‌, ಶೋಭಾ ಪಾಲಾಕ್ಷಪ್ಪ, ಶಿವ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಡಾ. ಬಿ. ಚಂದ್ರಶೇಖರ್‌, ಮಲೇಬೆನ್ನೂರು ಸೌಹಾರ್ದ ಸಹಕಾರ ಸಂಘದ ಜಗದೀಶ್‌, ಸಿದ್ದರಾಮೇಶ್ವರ, ಸಹಕಾರ ಸಂಘದ ವಿಜಯಕುಮಾರ್‌, ಜಿಗಳೇರ ಹಾಲೇಶಪ್ಪ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

error: Content is protected !!