ಭದ್ರಾ ನಾಲೆಗಳಲ್ಲಿ 26ಕ್ಕೆ ನೀರು ನಿಲುಗಡೆ

ಭದ್ರಾ ನಾಲೆಗಳಲ್ಲಿ 26ಕ್ಕೆ ನೀರು ನಿಲುಗಡೆ

ಶಿವಮೊಗ್ಗ, ನ.20- ಭದ್ರಾ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶದ ಮುಂಗಾರು ಹಂಗಾಮಿನ ಬೆಳೆಗಳಿಗೆ ಜುಲೈ 29 ರಿಂದ ಹರಿಸಲಾಗುತ್ತಿದ್ದ ನೀರನ್ನು ಇದೇ ದಿನಾಂಕ 26ಕ್ಕೆ ನಿಲುಗಡೆ ಮಾಡಲಾಗುವುದೆಂದು ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಇಂಜಿನಿಯರ್‌ ತಿಳಿಸಿದ್ದಾರೆ. 85ನೇ ನೀರಾವರಿ ಸಲಹಾ ಸಮಿತಿ ತೀರ್ಮಾನದಂತೆ ಜುಲೈ 29 ರಿಂದ ಇದೇ ದಿನಾಂಕ 26 ಕ್ಕೆ 120 ದಿನ ಆಗುತ್ತಿರುವುದರಿಂದ ಇದೇ ದಿನಾಂಕ 26ಕ್ಕೆ ನಾಲೆಯಲ್ಲಿ ನೀರು ನಿಲ್ಲಿಸಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬೇಸಿಗೆ ಹಂಗಾಮಿಗೆ ನೀರು ಹರಿಸುವ ಬಗ್ಗೆ ಡಿಸೆಂಬರ್‌ ಅಥವಾ ಜನವರಿಯಲ್ಲಿ ನಡೆಯಲಿರುವ ಭದ್ರಾ ಐಸಿಸಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

error: Content is protected !!