ಕೊಕ್ಕನೂರಿನಲ್ಲಿ 24ರಂದು ಬೃಹತ್‌ ಆರೋಗ್ಯ ಮೇಳ

ಕೊಕ್ಕನೂರಿನಲ್ಲಿ  24ರಂದು ಬೃಹತ್‌ ಆರೋಗ್ಯ ಮೇಳ

ಮಲೇಬೆನ್ನೂರು, ನ.20- ಕೊಕ್ಕನೂರು ಗ್ರಾಮದ ಶ್ರೀ ಪವನದೇವ ಕಲ್ಯಾಣ ಮಂಟಪದಲ್ಲಿ ಇದೇ ದಿನಾಂಕ 24ರ ಭಾನುವಾರ ಜಿಲ್ಲಾ ನೊಳಂಬ ವೀರಶೈವ ಲಿಂಗಾಯತ ಸಂಘ ಹಾಗೂ ನಂದಿಗುಡಿ ಸಂಸ್ಥಾನ ಕೃಪಾಪೋಷಿತ ವೀರಶೈವ ವಿದ್ಯಾವರ್ಧಕ ಸಂಘದ ವತಿಯಿಂದ ಬೃಹತ್‌ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಾವಣಗೆರೆ ಲತಾ ನರ್ಸಿಂಗ್‌ ಹೋಮ್‌ನ ಡಾ. ಈ. ವಿರುಪಾಕ್ಷಪ್ಪ ತಿಳಿಸಿದ್ದಾರೆ.

ಪಟ್ಟಣದ ನಂದಿ ಸೌಹಾರ್ದ ಸಹಕಾರಿ ಸಂಘದ ಕಛೇರಿಯಲ್ಲಿ ಬುಧವಾರ ಸಂಜೆ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಂಘಗಳ ಸಹಯೋಗದಲ್ಲಿ ಅಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಈ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ ಎಂದು ಹೇಳಿದರು.

ಡಾ. ಎನ್‌.ಆರ್‌. ದಿನೇಶ್‌ ಕುಮಾರ್‌ ಮಾತನಾಡಿ, ಈ ಶಿಬಿರದಲ್ಲಿ ಹೆರಿಗೆ ಮತ್ತು ಸ್ತ್ರೀರೋಗ ತಜ್ಞ ಡಾ. ಈ.ವಿರುಪಾಕ್ಷಪ್ಪ, ಕಣ್ಣಿನ ತಜ್ಞ ಡಾ. ಈಶ್ವರಪ್ಪ, ಮಕ್ಕಳ ತಜ್ಞ ಡಾ. ಬಸವಕುಮಾರ್‌, ಕೀಲುಮೂಳೆ ತಜ್ಞ ಡಾ. ಕೆ.ಎನ್‌. ಪವನ್‌, ಫಿಜಿಷಿಯನ್‌ ಡಾ.ಎಸ್‌.ಎಸ್‌. ಸಾಹುಕಾರ, ಮಕ್ಕಳ ಹೃದಯ ತಜ್ಞ ಡಾ. ಅರುಣ್‌ ಕರೇಗೌಡ ಸೇರಿದಂತೆ ಇನ್ನೂ ಅನೇಕ ವೈದ್ಯರು ಭಾಗವಹಿಸಲಿದ್ದಾರೆ ಎಂದರು.

ಐಎಂಎ ಮಲೇಬೆನ್ನೂರು ಶಾಖೆಯ ಅಧ್ಯಕ್ಷ ಡಾ. ಬಿ.ಚಂದ್ರಶೇಖರ್‌ ಮಾತನಾಡಿ, ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರಗಳು ಪ್ರತಿ ಹಳ್ಳಿಯಲ್ಲೂ ನಡೆಸಬೇಕು. ಅದಕ್ಕೆ ನಮ್ಮ ಐಎಂಎ ಸಹಕಾರವೂ ಇರುತ್ತದೆ ಎಂದರು.

ನಂದಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಗೌಡ್ರ ಬಸವರಾಜಪ್ಪ, ನಂದಿಗುಡಿ ಸಂಸ್ಥಾನ ಕೃಪಾಪೋಷಿತ ವೀರಶೈವ ವಿದ್ಯಾವರ್ಧಕ ಸಂಘದ ಹಳ್ಳಿಹಾಳ್‌ ಹೆಚ್‌. ಟಿ. ಪರಮೇಶ್ವರಪ್ಪ, ನಂದಿತಾವರೆ ತಿಮ್ಮನಗೌಡ, ಜಿ. ಬೇವಿನಹಳ್ಳಿಯ ಬಿ.ಜಿ.ತಿಮ್ಮನಗೌಡ, ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

error: Content is protected !!