ನೂತನ ಸಮುದಾಯ ಭವನದಲ್ಲಿಯೇ ಮುಂದಿನ ವರ್ಷದ ವಾಲ್ಮೀಕಿ ಜಯಂತಿ

ನೂತನ ಸಮುದಾಯ ಭವನದಲ್ಲಿಯೇ ಮುಂದಿನ ವರ್ಷದ ವಾಲ್ಮೀಕಿ ಜಯಂತಿ

ದಾವಣಗೆರೆ,  ನ.19- ನಗರದಲ್ಲಿ ನೂತನವಾಗಿ   ನಿರ್ಮಾಣವಾಗುತ್ತಿರುವ ವಾಲ್ಮೀಕಿ ಸಮುದಾಯ ಭವನದಲ್ಲಿಯೇ ಮುಂದಿನ ವರ್ಷದ ವಾಲ್ಮೀಕಿ ಜಯಂತಿಯನ್ನು ಆಚರಿಸೋಣ ಎಂದು ಮಾಜಿ ಶಾಸಕ ಹಾಗೂ ಜಿಲ್ಲಾ ವಾಲ್ಮೀಕಿ ಸಮಾಜದ ಗೌರವ ಅಧ್ಯಕ್ಷ ಎಸ್.ವಿ.ರಾಮಚಂದ್ರಪ್ಪ ಹೇಳಿದರು.

ನಗರದ ನಾಯಕ ವಿದ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಂಡಿದ್ದ  ಜಿಲ್ಲಾ ವಾಲ್ಮೀಕಿ ಸಮಾಜದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ 2.5ಲಕ್ಷ ವಾಲ್ಮೀಕಿ ನಾಯಕ ಸಮಾಜದ ಜನಸಂಖ್ಯೆ ಇದ್ದು ಎಲ್ಲರೂ ಸಂಘಟಿತರಾಗಬೇಕು. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳುವ ಮೂಲಕ ಮುಖ್ಯವಾಹಿನಿಗೆ ಬರಬೇಕು ಎಂದರು.

ನಗರದಲ್ಲಿ ಮಹಿಳಾ ವಸತಿ ನಿಲಯಕ್ಕೆ ಜಾಗ ಗುರುತಿಸಲಾಗಿದ್ದು ಶೀಘ್ರದಲ್ಲಿ ಮಹಿಳಾ ವಸತಿ ನಿಲಯಕ್ಕೆ ಶಂಕುಸ್ಥಾಪನೆ ಮಾಡಲಾಗುವುದು ಎಂದ ಅವರು, ಜಗಳೂರಿನಲ್ಲಿ ಎರಡು ವಾಲ್ಮೀಕಿ ಸಮುದಾಯ ಭವನಗಳು ಕಾರ್ಯನಿರ್ವಹಿಸು ತ್ತಿದ್ದು, ಹರಪನಹಳ್ಳಿ ಮತ್ತು ದಾವಣಗೆರೆ ನಗರದಲ್ಲಿ ಸಮುದಾಯ ಭವನ ಮುಗಿಯುವ ಹಂತದಲ್ಲಿವೆ ಎಂದರು. 

ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಬಿ.ವೀರಣ್ಣ  ಸಭೆಯ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಆಂಜನೇಯ ಗುರೂಜಿ ಮಾತನಾಡಿದರು.

ಈ ಸಂದರ್ಭದಲ್ಲಿ  ಜಿಲ್ಲಾ ವಾಲ್ಮೀಕಿ ಸಮಾಜದ ಉಪಾಧ್ಯಕ್ಷ  ಹರಪನಹಳ್ಳಿ ಕೆ.ಉಚ್ಚೆಂಗೆಪ್ಪ, ನಿರ್ದೇಶಕ ರಾದ ಶ್ರೀನಿವಾಸ ದಾಸಕರಿಯಪ್ಪ, ಗುಮ್ಮನೂರು ಶಂಭಣ್ಣ, ಶಾಮನೂರು ಪ್ರವೀಣ್, ಹದಡಿ ರಾಜಣ್ಣ, ಟಿ.ಎನ್ ರಾಜಶೇಖರ್, ಲಿಂಗರಾಜ ಫಣಿಯಾಪುರ, ಹೊನ್ನಾಳಿ ಎಚ್. ಸಿ. ಶೇಖರಪ್ಪ, ಗಿರಿಯಪ್ಪ, ಎಚ್. ಆರ್ ನರಸಿಂಹಯ್ಯ, ಹರಿಹರದ ಮಹೇಶ್ವರಪ್ಪ, ಕರಿಬಸಪ್ಪ, ಕೆ. ಆರ್ ಮಂಜುನಾಥ, ಭಾರತ್ ಕಾಲೋನಿ ರಂಗಸ್ವಾಮಿ, ಕೊಡಗನೂರು ಸುರೇಶ್, ಜಿಮ್ ನಾಗರಾಜ್, ಅನಿಲ್, ಹೊನ್ನಾಪುರ ಹನುಮಂತು  ಸೇರಿದಂತೆ ಆನೇಕರು ಉಪಸ್ಥಿತರಿದ್ದರು.

error: Content is protected !!