ದಾವಣಗೆರೆ, ನ. 19- ನಗರದ ಎಸ್.ಎಸ್ ಕೇರ್ ಟ್ರಸ್ಟ್ ವತಿಯಿಂದ ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವಿಶ್ವ ಮಧುಮೇಹ ದಿನಾಚರಣೆ ಪ್ರಯುಕ್ತ ನಮ್ಮ ನಡೆ ಆರೋಗ್ಯದೆಡೆ ಎಂಬ ಘೋಷಣೆಯೊಂದಿಗೆ ಮಧುಮೇಹ-ಸ್ವಾಸ್ಥ್ಯ ಮೇಳದ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ಸಕ್ಕರೆ ಕಾಯಿಲೆ ಇರುವವರಿಗೆ ಉಚಿತ ರಕ್ತ ಪರೀಕ್ಷೆಗಳು, ಇತರೆ ತಜ್ಞರುಗಳಿಂದ ತಪಾಸಣೆ, ಸಮಾಲೋಚನೆ, ಮಧುಮೇಹ ಕುರಿತು ಶಿಕ್ಷಣ, ಮಧುಮೇಹ ರೋಗಿಗಳಲ್ಲಿ ಪಾದದ ಆರೈಕೆ ಮತ್ತು ಪಾದರಕ್ಷೆಗಳ ಬಗ್ಗೆ ಪ್ರದರ್ಶನ ಹಾಗೂ ಇನ್ಸುಲಿನ್ ಉಪಕರಣಗಳ ಬಗ್ಗೆ ಮಾಹಿತಿ ನೀಡಲಾಗುವುದು ಹಾಗೂ ಇಸಿಜಿ, ಹೃದಯ ಪರೀಕ್ಷೆಯನ್ನೂ ಕೂಡಾ ಉಚಿತವಾಗಿ
ಮಾಡಲಾಗುವುದು. ಇದರ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.
ಎಸ್.ಎಸ್. ಆಸ್ಪತ್ರೆಯ ಪ್ರಾಂಶುಪಾಲ ಡಾ|| ಬಿ.ಎಸ್. ಪ್ರಸಾದ್ ಸ್ವಾಗತಿಸಿದರು.
ಡಾ. ಅರುಣ್‌ಕುಮಾರ್ ಅಜ್ಜಪ್ಪ ವಂದಿಸಿದರು. ಡಾ. ಶಶಿಕಲಾ ಕೃಷ್ಣಮೂರ್ತಿ, ಡಾ. ಜಿ.ಎಸ್. ಲತಾ, ಡಾ. ರಾಘವೇಂದ್ರ ಉಪಸ್ಥಿತರಿದ್ದರು.