ತುಂಗಭದ್ರಾ ಸೇತುವೆ ಬಳಿ ವೀರರಾಣಿ ಕಿತ್ತೂರು ಚನ್ನಮ್ಮ ಉದ್ಯಾನವನ ನಿರ್ಮಾಣ

ತುಂಗಭದ್ರಾ ಸೇತುವೆ ಬಳಿ ವೀರರಾಣಿ ಕಿತ್ತೂರು ಚನ್ನಮ್ಮ ಉದ್ಯಾನವನ ನಿರ್ಮಾಣ

ಹೊನ್ನಾಳಿ, ನ. 19 – ತುಂಗಭದ್ರಾ ನದಿ ಸೇತುವೆ ಬಳಿ ಸುಂದರವಾದ `ವೀರರಾಣಿ ಕಿತ್ತೂರು ಚೆನ್ನಮ್ಮ ಉದ್ಯಾನವನ’ ನಿರ್ಮಾಣಕ್ಕೆ ಆದ್ಯತೆ ನೀಡುವುದಾಗಿ ಶಾಸಕ ಡಿ.ಜಿ. ಶಾಂತನಗೌಡ ಭರವಸೆ ನೀಡಿದರು.

ತಾಲ್ಲೂಕಿನ ಮಾಸಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೊಲ್ಲರಹಳ್ಳಿ ಗ್ರಾಮದ ತುಂಗಭದ್ರಾ ಸೇತುವೆ ಮುಂಭಾಗದಲ್ಲಿ `ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತ ನಾಮ ಫಲಕ’ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ನಾಲ್ಕು ದಿಕ್ಕುಗಳಿಗೂ ಹೊನ್ನಾಳಿ ಮಧ್ಯವಿರುವ ಈ ಸ್ಥಳದಲ್ಲಿ ನಾಮ ಫಲಕ ಉದ್ಘಾಟಿನೆಗೊಳ್ಳುತ್ತಿದ್ದು, ಈ ಸ್ಥಳವು ಸಾರಿಗೆ ಸಂಪರ್ಕದ ಪ್ರಯಾಣಿಕರ ಆಕರ್ಷಣಿಯ ಸ್ಥಳವಾಗಿರುವ ಇಲ್ಲಿ ಲೋಕೋಪಯೋಗಿ ಇಲಾಖೆಗೆ ಸೂಚಿಸಿ ಶೀಘ್ರವೇ ಉದ್ಯಾನವನವನ್ನು ನಿರ್ಮಾಣ ಮಾಡಲು ಆದ್ಯತೆ ನೀಡಲಾಗುವುದು. ಇದಕ್ಕೆ ಪಂಚಮಸಾಲಿ ಸಮಾಜದ ಮುಖಂಡರು  ಹೆಚ್ಚು ಆಸಕ್ತಿ ವಹಿಸುವಂತೆ ಮನವಿ ಮಾಡಿದರು.

ವಿಶ್ವೇಶ್ವರಯ್ಯನವರು ಈ ತುಂಗಭದ್ರಾ ಸೇತುವೆ ಕಟ್ಟಿ ಇಂದಿಗೆ ನೂರು ವರ್ಷ ಗತಿಸಿವೆ. 1924 ರಲ್ಲಿ ಮಹಾತ್ಮ ಗಾಂಧೀಜಿಯವರು ಭೇಟಿ ನೀಡಿದ್ದನ್ನು ಸ್ಮರಿಸಿ, ಒಂದು ಕೀ.ಮೀ. ಅಂತರದಲ್ಲಿ ಬಸವಣ್ಣ ವೃತ್ತ, ವಿಜಯ ಸಂಗಮೇಶ್ವರ, ಕನಕದಾಸ, ಸಂಗೊಳ್ಳಿ ರಾಯಣ್ಣ, ಜಯಚಮರಾಜ ವೃತ್ತ ಇನ್ನಿತರೆ ಗಣ್ಯ ಹಾಗೂ ಮಹಾನೀಯರ ಹೆಸರಿನ ವೃತ್ತಗಳ ಮಧ್ಯದಲ್ಲಿದ್ದು. ಈ ಉದ್ಯಾನವನವು ಮತ್ತಷ್ಟು ಅರ್ಥಗರ್ಭಿತವಾಗಿ ಕಂಗೋಳಿಸಲಿದೆ ಎಂದರು.

ಪಂಚಮ ಸಾಲಿ ಸಮಾಜದ ತಾಲ್ಲೂಕು ಅಧ್ಯಕ್ಷ ಬೆನಕನಹಳ್ಳಿ ವೀರಣ್ಣ ಮಾತನಾಡಿ, ಹತ್ತು ವರ್ಷಗಳಿಂದ ಪಂಚಮಸಾಲಿ ಸಮಾಜದ ಮುಖಂಡರು ಜನ ಪ್ರತಿನಿಧಿಗಳಿಗೆ ಮನವಿ ಮೂಲಕ ಬೇಡಿಕೆ ಸಲ್ಲಿಸಿದ್ದು, ಈ ಬೇಡಿಕೆ ಇಂದು ಈಡೇರಿದೆ. ಶಾಸಕರು ನೀಡಿದ ಭರವಸೆಯಂತೆ ಇಂದು ಈ ಕಾರ್ಯವನ್ನು ನೆರವೇರಸಿದ್ದಾರೆ ಎಂದು ತಮ್ಮ ಹರ್ಷ ವ್ಯಕ್ತಪಡಿಸಿದರು.

ಪಂಚಮಸಾಲಿ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ಪರಮೇಶ್‍ ಪಟ್ಟಣಶೆಟ್ಟಿ ಮಾತನಾಡಿ, ಸುವರ್ಣ ಅಕ್ಷರದಲ್ಲಿ ಬರೆದಿಡುವ ದಿನವನ್ನಾಗಿ ಸಮಾಜವು ಸಂಭ್ರಮಿಸುತ್ತದೆ ಎಂದರು.

ಗೊಲ್ಲರಹಳ್ಳಿ ವರದರಾಜಪ್ಪ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಹೊನ್ನಾಳಿಗೆ ಬಂದಿದ್ದಾಳೆಂಬಂತೆ ಭಾಸವಾಗುತ್ತಿದ್ದು, ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಸೇರಿದಂತೆ, ಇಲ್ಲಿನ ಅಭಿವೃದ್ದಿ ಕಾರ್ಯಕ್ಕೆ ಮುಂದಾದರೆ ಆರ್ಥಿಕವಾಗಿ ಸಹಕರಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಾಸಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗೀತಮ್ಮ, ತಿಮ್ಮಪ್ಪ, ಸದಸ್ಯರಾದ ಸಿ.ಹೆಚ್. ಅಶೋಕ, ನಾಗರಾಜ, ರಾಜಪ್ಪ, ಹಳದಪ್ಪ, ಸುಲೋಚನ, ಪಿಡಿಓ ಶೇಖರನಾಯ್ಕ, ಕಾರ್ಯದರ್ಶಿ ಬಸವರಾಜಪ್ಪ, ಪಂಚಮಸಾಲಿ ಸಮಾಜದ ಯುವ ಘಟಕದ ಅಧ್ಯಕ್ಷ ಸಾಯಿ ಹಾಲೇಶ್, ನಗರ ಘಟಕದ ಅಧ್ಯಕ್ಷ ಗಿರೀಶ್, ಮಹಿಳಾ ಘಟಕದದ ಅಧ್ಯಕ್ಷೆ ಶಿಲ್ಪ ರಾಜುಗೌಡ, ಮುಖಂಡ ಕುಂಕೋದ ಹಾಲೇಶ್, ಕಾಯಿಬಸಣ್ಣ, ಪೇಟೆ ಪ್ರಶಾಂತ, ಇಡ್ಲಿ ಶಿವಣ್ಣ, ಹೆಚ್.ಪಿ. ರುದ್ರಪ್ಪ, ಬೆನಕನಹಳ್ಳಿ ಚನ್ನಬಸಪ್ಪ, ಅಶೋಕ, ಸಿದ್ದೇಶ ನಾಡಿಗ್, ಮೃತ್ಯುಂಜಯ ಪಾಟೀಲ್ ಇನ್ನಿತರರಿದ್ದರು.

error: Content is protected !!