ಗ್ರಾಮೀಣ ಜನರ ಸ್ವಾಭಿಮಾನದ ಬದುಕಿಗೆ ಸಹಕಾರ ಕ್ಷೇತ್ರ ಕಾರಣ

ಗ್ರಾಮೀಣ ಜನರ ಸ್ವಾಭಿಮಾನದ ಬದುಕಿಗೆ ಸಹಕಾರ ಕ್ಷೇತ್ರ ಕಾರಣ

 ಹರಪನಹಳ್ಳಿ ಸಹಕಾರ ಸಪ್ತಾಹದಲ್ಲಿ ತೆಗ್ಗಿನಮಠದ ವರಸದ್ಯೋಜಾತ ಶ್ರೀಗಳು

ಹರಪನಹಳ್ಳಿ, ನ.19- ಗ್ರಾಮೀಣ ಜನರು ಸ್ವಾಭಿಮಾನದ ಬದುಕು ಕಾಣಲು ಸಹಕಾರ ಕ್ಷೇತ್ರದಿಂದ ಸಾಧ್ಯವಾಗಿದೆ ಎಂದು ತೆಗ್ಗಿನಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ   ಹೇಳಿದರು.

ಪಟ್ಟಣದ ರೇಣುಕಾಚಾರ್ಯ ಕಲ್ಯಾಣ ಮಂಟಪದಲ್ಲಿ   ರಾಜ್ಯ ಸಹಕಾರ ಮಹಾಮಂಡಳಿ,  ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ. ಸಹಕಾರ ಇಲಾಖೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆ, ಬಳ್ಳಾರಿ ಜಿಲ್ಲಾ ಸಹಕಾರ ಯೂನಿಯನ್, ಬಳ್ಳಾರಿ ಜಿಲ್ಲಾ  ಸಹಕಾರ ಕೇಂದ್ರ ಬ್ಯಾಂಕ್.ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಸಹಕಾರ ಹಾಲು ಒಕ್ಕೂಟ, ಇಪ್ಕೋ ಸಂಸ್ಥೆ ಹಾಗೂ ಕ್ರಿಬ್ಕೋ  ಸಹಯೋಗದೊಂದಿಗೆ ಹಮ್ಮಿಕೊಳ್ಳ ಲಾಗಿದ್ದ   71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದ  ಸಾನಿಧ್ಯ ವಹಿಸಿ  ಅವರು ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಿಂದಲೂ ಇದ್ದ ಸಹಕಾರ ಆಂದೋಲನಕ್ಕೆ ಸ್ವಾತಂತ್ರ್ಯೋತ್ತರ ಕಾಲದಲ್ಲಿ ಪಂಚ ವಾರ್ಷಿಕ ಯೋಜನೆಗಳ ಮೂಲಕ ಜವಾಹರಲಾಲ್ ನೆಹರೂ ಬಲ ತುಂಬಿದರು. ಇದು ಸಹಕಾರ ಕ್ಷೇತ್ರಕ್ಕೆ ದೊರೆತಿರುವ ದೊಡ್ಡ ಬಲ.   ಹಿರಿಯರ ತ್ಯಾಗ, ನಿಸ್ವಾರ್ಥ ಸೇವೆಯಿಂದ ಸಹಕಾರ ಕ್ಷೇತ್ರ ಎತ್ತರಕ್ಕೆ ಬೆಳೆದು ನಿಂತಿದೆ. ಸಮಾಜದ ಆರ್ಥಿಕ ಸಬಲೀಕರಣಕ್ಕೆ ಕಾರಣವಾಗಿರುವ ಈ ಕ್ಷೇತ್ರದಲ್ಲಿ ದುಡಿಯುವವರ ಸಮಸ್ಯೆಗೂ ಸರ್ಕಾರ ಸ್ಪಂದಿಸಬೇಕಾಗಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್‌ ಮಾತನಾಡಿ, ಸಮಾಜ ಬದಲಿಸುವ ಶಕ್ತಿ ಸಹಕಾರ ಕ್ಷೇತ್ರಕ್ಕಿದೆ. ಸಹಕಾರದಿಂದ ಮಹಿಳಾ ಸಶಕ್ತೀಕರಣ ಸಾಧ್ಯವಾಗಿದೆ. ಸಹಕಾರದಂತೆ ಎಲ್ಲ ಕ್ಷೇತ್ರಗಳಲ್ಲೂ ದ್ವೇಷ ಮೀರಿ ಪ್ರೀತಿ, ವಿಶ್ವಾಸದ ಅಲೆ ಮೂಡಬೇಕು. ಸಮಾಜದಲ್ಲಿ ಪ್ರಚೋದನಾತ್ಮಕ ಕ್ರಿಯೆಗಳಿಗೆ ಸಹಕಾರ ಉತ್ತರವಾಗಬೇಕು. ಮಹಿಳೆಯರು ಹೈನುಗಾರಿಕೆ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿದ್ದಾರೆ.     ಪ್ರತಿ ಹಳ್ಳಿಯಲ್ಲೂ ಮಹಿಳೆಯರು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಇವರೆಲ್ಲರ ಶ್ರಮದಿಂದ ಸಹಕಾರಿ ಕ್ಷೇತ್ರ ಶ್ರೀಮಂತವಾಗಿದೆ ಎಂದರು.

ಬಳ್ಳಾರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ  ವೈ.ಡಿ.ಅಣ್ಣಪ್ಪ, ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ,  ಸಹಕಾರಿ ಸಂಘವು ಜನರ ಒಡೆತನದ ಮತ್ತು ಜನರೇ ನಡೆಸುವ ಸಂಸ್ಥೆಯಾಗಿದೆ ಮತ್ತು ಅದರ ಸರಕು ಮತ್ತು ಸೇವೆಗಳನ್ನು ಬಳಸುವ ಜನರಿಗಾಗಿ ಈ ಸಂಘಗಳು ಕೆಲಸ ಮಾಡುತ್ತವೆ. ಹೆಸರೇ ಸೂಚಿಸುವಂತೆ, ಜನರು ಅಥವಾ ಸಂಸ್ಥೆಯ ಸದಸ್ಯರು ತಮ್ಮ ಸಾಮಾನ್ಯ ಪ್ರಯೋಜನ ಮತ್ತು ಪ್ರಗತಿಗಾಗಿ ಸಂಪನ್ಮೂಲಗಳನ್ನು ಒಟ್ಟುಗೂಡಿಸಲು ಸಹಕಾರದಿಂದ ಕೆಲಸ ಮಾಡುತ್ತಾರೆ. ಸಹಕಾರ ಸಂಘ ವೈಯಕ್ತಿಕ ಬೆಳವಣಿಗೆ, ನಾಯಕತ್ವ ಮತ್ತು ನಿರ್ಧಾರವನ್ನು ಬೆಂಬಲಿಸುವ ವ್ಯವಸ್ಥೆಗಳನ್ನು ಮಾಡುತ್ತಿದೆ ಎಂದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪರ್ತಕರ್ತ ಹೆಚ್.ಬಿ.ಮಂಜುನಾಥ `ಮಹಿಳೆಯರು, ಯುವಕರು ಮತ್ತು ಅಬಲ ವರ್ಗಗಳಿಗಾಗಿ ಸಹಕಾರ ಸಂಸ್ಥೆಗಳು’ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು. 

ಹೊಸಪೇಟೆ ಬಿ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ  ಐ.ದಾರುಕೇಶ್, ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಪಿ.ಎಲ್. ಪೋಮ್ಯನಾಯ್ಕ ಮಾತನಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಎಂ.ವಿ.ಅಂಜಿನಪ್ಪ,  ಬಳ್ಳಾರಿ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಗಿಡ್ಡಳ್ಳಿ ನಾಗರಾಜ,  ಹಡಗಲಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್  ನಿರ್ದೇಶಕ  ಎನ್.ಎಂ  ವಹಾಬ್, ಬಿ.ಡಿ.ಸಿ.ಸಿ ಬ್ಯಾಂಕ್ ಕ್ಷೇತ್ರಾಧಿಕಾರಿ ಹೆಚ್. ಅಂಜಿನಪ್ಪ,  ಸಹಕಾರ ಸಂಘದ ಹೆಚ್.ತಿಮ್ಮಾನಾಯ್ಕ, ಲೆಕ್ಕ ಪರಿಶೋಧಕ ಭಾಸ್ಕರ್, ಟಿ.ಎ.ಪಿ.ಸಿ.ಎಂ.ಎಸ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ತಿರುಪತಿ,  ಎಂ.ಪಿ.ಆರ್ .ಎ.ಸಿ.ಎಸ್  ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಿ.ಬಸವರಾಜ, ಚಂದ್ರಾಂಬಿಕಾ ಸಹಕಾರ ಸಂಘದ ಅಧ್ಯಕ್ಷರಾದ  ಅಂಬುಜಮ್ಮ, ಸಹಕಾರ ಸಂಘಗಳ ಸಹಾಯಕ ನಿಬಂಧಕ  ಶರಣಬಸಪ್ಪ, ಸಹಕಾರ ಸಂಘಗಳ ಲೆಕ್ಕಾಪರಿಶೋಧನಾ ಸಹಾಯಕ ನಿರ್ದೇಶಕ  ಷಣ್ಮುಖಪ್ಮ ಎಸ್, ಸಹಕಾರ ಅಭಿವೃದ್ದಿ ಅಧಿಕಾರಿ  ಜಿ.ಎಸ್  ಸುರೇಂದ್ರ, ಮುಖಂಡರಾದ ಅಳವಂಡಿ ಕೊಟ್ರೇಶ, ಬಿ.ಎಚ್.ಬಸವರಾಜ, ಬಿ.ಯಂಕಪ್ಪ ಸೇರಿದಂತೆ ಇತರರಿದ್ದರು.

error: Content is protected !!