ರಾಣೇಬೆನ್ನೂರು : ಸ್ವಾರ್ಥಿಗಳಾಗದೇ ಬೇರೆಯವರಿಗಾಗಿಯೂ ಬದುಕಬೇಕು

ರಾಣೇಬೆನ್ನೂರು : ಸ್ವಾರ್ಥಿಗಳಾಗದೇ ಬೇರೆಯವರಿಗಾಗಿಯೂ ಬದುಕಬೇಕು

ರಾಣೇಬೆನ್ನೂರು, ನ.17- ಕೇವಲ ನಮಗಾಗಿ ಬದುಕದೇ ಬೇರೆಯವರಿಗಾ ಗಿಯೂ ಬದುಕುವದು ಅವಶ್ಯವಿದೆ ಎಂಬುದನ್ನು ರಂಭಾಪುರಿ ಲಿಂಗೈಕ್ಯ ಜಗ ದ್ಗುರು ಶ್ರೀ ವೀರಗಂಗಾಧರ ಮಹಾ ಸ್ವಾಮಿಗಳು ಬದುಕಿ ತೋರಿಸಿಕೊಟ್ಟರು. ಅನುಭವವು ಕಷ್ಟ – ಸುಖಗಳ ಸಮ್ಮಿಲನಗಳ ಪ್ರಾಪಂಚಿಕದ್ದಾದರೆ, ಅನುಭಾವ ದೈವತ್ವಕ್ಕೆ ಸಂಬಂಧಿಸಿದ್ದು, ಅನುಭಾವದಿಂದ ಆನಂದ ಪಡೆಯಬಹುದು ಎಂದು ಹೊನ್ನಾಳಿ ಹಿರೇಕಲ್ಮಠದ ಶ್ರೀ ಚನ್ನಮಲ್ಲಿಕಾರ್ಜುನ ಶ್ರೀಗಳು ಹೇಳಿದರು. 

ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಇಂದು ನಡೆದ ದತ್ತಿ ಕಾರ್ಯಕ್ರಮ, ಲಿಂಗೈಕ್ಯ ಒಡೆಯರ ಚಂದ್ರಶೇಖರ್ ಶಿವಾಚಾರ್ಯ ಸಂಸ್ಕರಣೋತ್ಸವ, ಗೌರಿ ಹುಣ್ಣಿಮೆ ಮಾಸಿಕ ಧರ್ಮ ಸಭೆ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು   ಮಾತನಾಡಿದರು.

ದತ್ತಿ ಕಾರ್ಯಕ್ರಮದ ಕುರಿತು ಲಿಂಗೈಕ್ಯ ಜಗದ್ಗುರು ವೀರಗಂಗಾಧರ ಮಹಾಸ್ವಾಮಿಗಳ ವ್ಯಕ್ತಿತ್ವ ದರ್ಶನ ಹಾಗೂ ಅವರ ಜೀವಿತಾವಧಿ ಕುರಿತು ವೇದಮೂರ್ತಿ ಗದಿಗೆಯ್ಯ ಶಾಸ್ತ್ರಿ ಅವರು ವಿವರಿಸಿದರು. 

ವೇದಿಕೆಯಲ್ಲಿ ನೆಹರು ಮಾರ್ಕೆಟ್ ವರ್ತಕರ ಸಂಘದ ಅಧ್ಯಕ್ಷ ಬಸವರಾಜ ಪಟ್ಟಣಶೆಟ್ಟಿ, ಕಸಾಪ ಅಧ್ಯಕ್ಷ ಪ್ರಭಾಕರ ಶಿಗ್ಲಿ, ಶಿವಪ್ಪ ಗುರಿಕಾರ, ಶಾಂತಾ ಪಾಟೀಲ, ಭಾಗ್ಯಶ್ರೀ ಗುಂಡಗಟ್ಟಿ, ಎಂ.ಕೆ.ಹಾಲಸಿದ್ದಯ್ಯ, ಸುನಂದ ತಿಳವಳ್ಳಿ ಮತ್ತಿತರರಿದ್ದರು.

error: Content is protected !!