ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಉಳಿಸಿ

ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಉಳಿಸಿ

ರಾಜ್ಯೋತ್ಸವ ಮತ್ತು ಘಟಿಕೋತ್ಸವದಲ್ಲಿ ಸಾಹಿತಿ ಆರ್.ಜಿ. ಹಳ್ಳಿ ನಾಗರಾಜ್ ಅಭಿಮತ

ದಾವಣಗೆರೆ, ನ.18- ಕನ್ನಡಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದ್ದು, ಅಷ್ಟೊಂದು ಶ್ರೀಮಂತ ಭಾಷೆ ಕನ್ನಡವನ್ನು ಉಳಿಸಿ, ಬೆಳೆಸುವ ಕೆಲಸವಾಗಬೇಕು ಎಂದು ಹಿರಿಯ ಸಾಹಿತಿ ಆರ್. ಜಿ. ಹಳ್ಳಿ ನಾಗರಾಜ್  ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಜೆ.ಹೆಚ್. ಪಟೇಲ್ ಕಾಲೇಜಿನ ವತಿಯಿಂದ ಮೊನ್ನೆ ಏರ್ಪಾಡಾಗಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಘಟಿಕೋತ್ಸವ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದು ಅವರು ಧ್ವಜ ವಂದನೆ ಮಾಡಿ ಮಾತನಾಡಿದರು.

ಶ್ರೀಮಂತ ಭಾಷೆ ಕನ್ನಡ ಇರುವಾಗ ಸಂಸ್ಕೃತ ಭಾಷೆ ಯಾಕೆ ಬೇಕು, ಕನ್ನಡ ಕಲಿಯಲು ಮಾತನಾಡಲು ಬಲು ಸರಳ, ಹಿಂದಿ ಭಾಷೆ ಅದು ರಾಷ್ಟ್ರ ಭಾಷೆ ಅಲ್ಲ. ಭಾರತದಲ್ಲಿ ಹೆಚ್ಚು ಮಾತನಾಡುವ ಭಾಷೆ ಎಲ್ಲಾ ಭಾಷೆಗಳು ಕೂಡ ರಾಷ್ಟ್ರೀಯ ಭಾಷೆಗಳೇ. ತಮಿಳು ಭಾಷೆಗೆ ಸರಿ ಸಮಾನವಾದ ಭಾಷೆ ನಮ್ಮ ಕನ್ನಡ ಭಾಷೆ. ನಮಗೂ ಕೂಡ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. ಇದು ಅತ್ಯಂತ ಸಂತೋಷದ ವಿಷಯ ಎಂದು ಹೇಳಿದರು.

ದಾವಣಗೆರೆಯಲ್ಲಿ ಸರಿಸುಮಾರು 17 ನೇ ಶತಮಾನದಲ್ಲಿ ಬೆಳೆದ ಇಲ್ಲೆ ಸುತ್ತ ಮುತ್ತ ಇದ್ದಂತಹ ಮಹಲಿಂಗರಂಗ ಕವಿಗಳನ್ನು ಸ್ಮರಿಸಿದ ಅವರು, ಇಂತಹವರು ನಮ್ಮೂರಿನವರು ಎಂದು ಹೇಳೋಕೆ ತುಂಬಾ ಸಂತೋಷ. ಅವರು ಹೆಚ್ಚಾಗಿ ವೃತ್ತಿರಂಗಭೂಮಿಗೆ ತಮ್ಮ ಸೇವೆಯನ್ನು ಮಾಡಿದರು ಎಂದು ಸ್ಮರಿಸಿದರು.

ಕವಿ ಗೋವಿಂದ ಪೈ ಮೂಲತಃ ಕೇರಳದವರಾದ್ರೂ ಕೂಡ ಕನ್ನಡದಲ್ಲಿ ಕಥೆ ಕವನಗಳನ್ನು ರಚಿಸಿ ಕನ್ನಡದ ರಾಷ್ಟ್ರಕವಿಯಾದರು. ಇಷ್ಟೊಂದು ಸುಂದರ ಸರಳ ಭಾಷೆ ಕನ್ನಡ ಅದುವೇ ಮಾತೃ ಭಾಷೆ. ನಾವು ಎಷ್ಟೆ ವಿದ್ಯಾವಂತರುಗಳಾಗಿ ದೊಡ್ಡ ಹುದ್ದೆಯಲ್ಲಿದ್ದರೂ ಕೂಡ ಕನ್ನಡವನ್ನು ಮರೆಯಬಾರದಯ. ಇದು ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗಬಾರದು. ನೀವು ಹೆಚ್ಚಾಗಿ ಕನ್ನಡ ಮಾತನಾಡಿ, ಇತರೆ ಭಾಷಿಕರನ್ನು ಗೌರವಿಸಿ ಕನ್ನಡ ಕಲಿಸಲು ಕಲಿಯಲು ಪ್ರೇರೇಪಿಸಿ ಎಂದು ತಿಳಿಸಿದರು.

ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ವಿದ್ಯಾರ್ಥಿಗಳು ತಮ್ಮ ಗುರಿಯನ್ನು ನಿಶ್ಚಯಿಸಿಕೊಂಡು, ಅದಕ್ಕೆ ಅನುಗುಣವಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಲಿಕೆ ಜೊತೆಗೆ ಕೌಶಲ್ಯಾಧಾರಿತ ಶಿಕ್ಷಣ ಮುಖ್ಯ ಎಂದರು.

ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷೆ ಷಹನಾಜ್ ಬಿ., ಕಾರ್ಯದರ್ಶಿ ಮುಸ್ತಫಾ, ನಿರ್ದೇಶಕರಾದ ಸದ್ದಾಂ ಹುಸೇನ್, ಆರ್. ಜಿ. ಕರಿಬಸಪ್ಪ, ಜ್ಯೋತಿ, ವಿದ್ಯಾವತಿ ಮತ್ತಿತರು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

error: Content is protected !!