ದಾವಣಗೆರೆ, ನ. 17- ಬಿ.ವಿ.ಐ. ಹಾಗೂ ಬಾಲಾಜಿ ಎಜುಕೇಷನಲ್ ಅಂಡ್ ಸೋಷಿಯಲ್ ವೆಲ್ಫೇರ್ ಟ್ರಸ್ಟ್ ಹಾಗೂ ಆಕುಕ ಇಲಾಖೆ ದಾವಣಗೆರೆ ತಾಲ್ಲೂಕು ಮತ್ತು ದಾವಣಗೆರೆ ಹೈಟೆಕ್ ಡಯಾಗ್ನೋಸ್ಟಿಕ್ ಸೆಂಟರ್ ಇವರ ಸಹಯೋಗದೊಂದಿಗೆ ಈಚೆಗೆ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು.
ಕಾರ್ಯದರ್ಶಿ ರಮೇಶ್ ಬಾಬು ಗುಜ್ಜರ್ ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷರಾದ ಶ್ರೀಮತಿ ಸರಳ ಆಮಟೆ ಸ್ವಾಗತಿಸಿದರು.
ಅತಿಥಿಗಳಾಗಿ ದೈವ ಮಂಡಳಿಯ ಕಾರ್ಯದರ್ಶಿ ಈಶ್ವರರಾವ್ ಗುಜ್ಜರ್ ಆಗಮಿಸಿದ್ದರು.
ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ದೇವರಾಜ್ ಪಟಕೆ ಮಾತನಾಡಿದರು. ಕೈಲಾಸ್ ರಕ್ತ ಪರೀಕ್ಷೆ ಬಗ್ಗೆ ವಿವರಿಸಿದರು. ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ, ಕಫ, ಡೆಂಗ್ಯೂ, ಕಣ್ಣಿನ ಪರೀಕ್ಷೆ, ಲಿಪಿಡ್ ಆರ್‌ಬಿಎಸ್ ಪ್ರೊಫೈಲ್, ಕೊಲೆಸ್ಟ್ರಾಲ್ ಪರೀಕ್ಷೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಬಿ.ವಿ. ಐ. ನ ಮಾಜಿ ಗವರ್ನರ್ ಗೋಪಾಲ ನವಲೆ, ಪದಾಧಿಕಾರಿಗಳಾದ ಮಹೇಶ್ ಶೇಂಡಿಗೆ, ರಮೇಶ ಅಂಬರ್‌ಕರ್, ದಯಾನಂದ ಮಹೇಂದ್ರಕರ್, ಶ್ರೀಮತಿ ನಯನ ಅಂಬರ್‌ಕರ್, ಶ್ರೀಮತಿ ಆರತಿ ಗುಜ್ಜರ್, ಶ್ರೀಮತಿ ಅನುಸೂಯ ಗುಜ್ಜರ್, ಶ್ರೀಮತಿ ಉಷಾ ಮಹೇಂದ್ರಕರ್. ಸದಸ್ಯರಾದ ಮಂಜುನಾಥ ಗಡ್ಡಾಳೆ, ಡಾ. ಶಿಲ್ಪಾ ಹಿರಾಸ್ಕರ್ ಉಪಸ್ಥಿತರಿದ್ದರು.