ದಾವಣಗೆರೆ, ನ.17- ನಗರದ ಹಳೇ ಕುಂದುವಾಡ ಶಿಬಾರದಲ್ಲಿ ಶ್ರೀ ಮೈಲಾರಲಿಂಗೇಶ್ವರ ದೇವರ ಬೆಳ್ಳಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ದೇವಸ್ಥಾನದ ಭಕ್ತ ಮುತ್ತುಲಿಂಗಪ್ಪರ ಎಂ.ಡಿ. ಬಸವರಾಜ್ ಹಾಗೂ ಕುಟುಂಬದವರು ಬೆಳ್ಳಿ ಮೂರ್ತಿ ಸಮರ್ಪಣೆ ಮಾಡಿದ್ದಾರೆ. ದೇವರ ಹರಕೆ ಹಿನ್ನೆಲೆಯಲ್ಲಿ ಗೌರಿ ಹುಣ್ಣಿಮೆಯ ದಿನದಂದು ಬೆಳ್ಳಿ ಮೂರ್ತಿಯನ್ನು ಎಂ.ಡಿ. ಬಸವರಾಜ್ ದಂಪತಿ ಹಾಗೂ ಮುತ್ತುಲಿಂಗಪ್ಪರ ಕುಟುಂಬಸ್ಥರು ಮೈಲಾರ ದೇವಸ್ಥಾನ ಕಮಿಟಿಗೆ ಸಮರ್ಪಣೆ ಮಾಡಿದ್ದು, ಬಳಿಕ ಬೆಳ್ಳಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ಡಮರುಗ, ದೋಣಿ ಸಮೇತ ಎಡೆ ಇರಿಸಿ ಅಭಿಷೇಕ, ವಿಶೇಷ ಪೂಜೆ ನೆರವೇರಿಸಲಾಗಿದೆ, ನಂತರ ಅನ್ನ ಸಂತರ್ಪಣೆ ನಡೆಯಿತು.
ಹಳೇ ಕುಂದುವಾಡದಲ್ಲಿ ಶ್ರೀ ಮೈಲಾರ ಲಿಂಗೇಶ್ವರ ಬೆಳ್ಳಿ ಮೂರ್ತಿ ಪ್ರತಿಷ್ಠಾಪನೆ
