ಶಾಲಾ ಕೊಠಡಿಗಳ ಉದ್ಘಾಟನೆ, ಹಳೇ ವಿದ್ಯಾರ್ಥಿಗಳ ಕಾಳಜಿಗೆ ಮೆಚ್ಚುಗೆ

ಶಾಲಾ ಕೊಠಡಿಗಳ ಉದ್ಘಾಟನೆ,  ಹಳೇ ವಿದ್ಯಾರ್ಥಿಗಳ ಕಾಳಜಿಗೆ ಮೆಚ್ಚುಗೆ

ಮಲೇಬೆನ್ನೂರು, ನ.17- ಪಟ್ಟಣದ ಶ್ರೀ ಮಾರುತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಹಳೇ ವಿದ್ಯಾರ್ಥಿಗಳು ಮತ್ತು ಪೋಷಕರ ಸಹಕಾರದಿಂದ ನಿರ್ಮಿಸಿರುವ ಎರಡು ಕೊಠಡಿಗಳ ಪೈಕಿ ಒಂದು ಕೊಠಡಿ ಯನ್ನು ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಹರಿಹರ ತಾ. ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಮತ್ತು ಮತ್ತೊಂದು ಕೊಠಡಿ ಯನ್ನು ಹಳೇ ವಿದ್ಯಾರ್ಥಿಗಳು ಉದ್ಘಾಟಿಸಿ ದರು.  ನಂತರ ಮಾತನಾಡಿದ ಶ್ರೀನಿವಾಸ್ ಅವರು, ಎಲ್ಲಾ ಸರ್ಕಾರಗಳು ಶಿಕ್ಷಣಕ್ಕೆ ಒತ್ತು ಕೊಡುತ್ತಾ ಬಂದಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಚೆನ್ನಾಗಿ ಓದಿ ಪ್ರಜ್ಞಾವಂತರಾಗಬೇಕೆಂದು ಮನವಿ ಮಾಡಿದರು.

ಶ್ರೀ ಮಾರುತಿ ವಿದ್ಯಾಸಂಸ್ಥೆ ಅಧ್ಯಕ್ಷ ಸತ್ಯನಾರಾಯಣ್ ಜೋಯ್ಸ್,  ಕಾರ್ಯದರ್ಶಿ ಎಂ.ಡಿ.ಮುರುಳೀಧರ್ ರಾವ್, ಖಜಾಂಚಿ ಗೋವಿಂದರಾಜ್, ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗರಾಜ್, ಪುರಸಭೆ ಸದಸ್ಯರಾದ ಸಾಬೀರ್ ಅಲಿ, ಪಿ.ಆರ್.ರಾಜು, ಭೋವಿ ಕುಮಾರ್, ಪುರಸಭೆ ಆಶ್ರಯ ಕಮಿಟಿ ಸದಸ್ಯ ಕಣ್ಣಾಳ್ ನಾಗರಾಜ್, ಮುಖಂಡರಾದ ಯರೇಚಿಕ್ಕ ನಹಳ್ಳಿ ರಂಗನಾಥ್, ಹಳೇ ವಿದ್ಯಾರ್ಥಿಗಳಾದ ನಿಟ್ಟೂರು ರಾಘವೇಂದ್ರ, ಪವನ್ ಕುಮಾರ್, ಸಾಧಿಕ್ ಮತ್ತು   ಇತರರು ಈ ವೇಳೆ ಹಾಜರಿದ್ದರು.  ಮುಖ್ಯ ಶಿಕ್ಷಕ ಪರಮೇಶ್ವರಪ್ಪ ಸ್ವಾಗತಿಸಿದರು. ಡಿ.ಬಿ.ಹನುಮಂತಪ್ಪ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

error: Content is protected !!