ದಾವಣಗೆರೆ, ನ.17- ಬೇಡಿದ ವರಗಳನ್ನು ಪೂರೈಸುವ ದೇವಿ ಎಂದೇ ಹೆಸರಾಗಿರುವ ಗುಡ್ಡಾಪುರದ ಶ್ರೀ ದಾನಮ್ಮ ದೇವಿಯ ಪುರಾಣವು ನಗರದ ದೊಡ್ಡಪೇಟೆಯಲ್ಲಿರುವ ಶ್ರೀ ಬಸವೇಶ್ವರ ಮತ್ತು ಶ್ರೀ ದಾನಮ್ಮ ದೇವಿ ದೇವಸ್ಥಾನದಲ್ಲಿ ನಿನ್ನೆ ಆರಂಭವಾಯಿತು. ಶ್ರೀ ಮಹಾಂತೇಶ ಶಾಸ್ತ್ರಿಗಳು ಹಿರೇಮಠ ಅವರು ಪುರಾಣವನ್ನು ನಡೆಸಿಕೊಡುತ್ತಿದ್ದಾರೆ. ಶ್ರೀ ದೊಡ್ಡಪೇಟೆ ಬಸವೇಶ್ವರ ಸೇವಾ ಸಂಘದ ಬೇತೂರು ರಾಜೇಶ್, ನಿಜಗುಣ ಶಿವಯೋಗಿ, ಮಾಗಾನಹಳ್ಳಿ ಬಸವರಾಜ, ಹೊಳೆಹೊನ್ನೂರು ಈಶಣ್ಣ ಮತ್ತು ಹ್ಯಾಳೇದ್ ಕೊಟ್ರೇಶ್, ಕರಿಬಸಯ್ಯ ಹಾಗೂ ಇತರರು ಉಪಸ್ಥಿತರಿದ್ದರು.
January 16, 2025