ಹರಪನಹಳ್ಳಿ, ನ.15- ಮಹಾರಾಷ್ಟ್ರದ ನಾಂದಿನಿ ಕ್ಷೇತ್ರದ ಜೈನ್ ದಿಗಂಬರ ಮುನಿ ಸಂಘದ ಆಚಾರ್ಯ ಶ್ರೀ ವಿಶುದ್ದ ಸಾಗರ ಮಹಾರಾಜ ಮುನಿಗಳು ಹಡಗಲಿಯಿಂದ ಹರಪನಹಳ್ಳಿಗೆ ಆಗಮಿಸಿದಾಗ ಜೈನ್ ಸಮಾಜದ ಬಂಧುಗಳು ಸಕಲ ವಾದ್ಯಗಳೊಂದಿಗೆ ಬರಮಾಡಿಕೊಂಡರು.
ಈ ವೇಳೆ ಜೈನ ಸಮಾಜದ ಅಧ್ಯಕ್ಷ ಎಚ್. ಪದ್ಮನಾಭ, ಕಾರ್ಯದರ್ಶಿ ಯು.ಪಿ. ನಾಗರಾಜ, ಖಜಾಂಚಿ ಬಿ. ಪದ್ಮಾರಾಜ, ಮುಖಂಡರಾದ ಹೆಚ್.ಜಿನದತ್ತ, ಮಹಾವೀರ ಇಜಾರಿ, ಸುಮೇರಿಮಲ್ ಜೈನ್, ಕಾಂತಿಲಾಲ್ ಜೈನ್, ಉತ್ತಮ ಚಂದ್ ಜೈನ್, ಸಗರಿ ಅನಂತರಾಜ್, ಎಂ.ಜೆ. ಜಿನದತ್ತರಾಯ, ಹೆಚ್.ಚಂದ್ರಗೌಡ, ಆರ್. ಪದ್ಮಾರಾಜ ಜೈನ್ ಹಾಗೂ ಶ್ವೇತಾಂಬರ ಜೈನ್ ಸಮಾಜದ ಬಂಧುಗಳಿದ್ದರು.