ಹರಿಹರ ನಗರ ದೇವತೆ ಜಾತ್ರೆ ಕಾಣಿಕೆ ಡಬ್ಬಿ ಗಡಿಗೆಗೆ ಚಾಲನೆ

ಹರಿಹರ ನಗರ ದೇವತೆ ಜಾತ್ರೆ ಕಾಣಿಕೆ ಡಬ್ಬಿ ಗಡಿಗೆಗೆ ಚಾಲನೆ

ಹರಿಹರ, ನ.15-   ನಗರದಲ್ಲಿ ಬರುವ ಮಾರ್ಚ್ 18 ರಿಂದ 22 ರವರಿಗೆ ನಡೆಯುವ ಊರಮ್ಮ ದೇವಿ ಉತ್ಸವದ ಅಂಗವಾಗಿ ಶಿಬಾರ ವೃತ್ತದಲ್ಲಿರುವ ಮೂಲ ಗ್ರಾಮದೇವತೆ ದೇವಸ್ಥಾನದಲ್ಲಿ ಅರ್ಚಕರಾದ ನಾರಾಯಣ ಜೋಯಿಸರು ಮತ್ತು ಚಿದಂಬರ ಜೋಯಿಸರ ನೇತೃತ್ವದಲ್ಲಿ ಡಬ್ಬಿ ಗಡಿಗೆಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ಇದೇ ಸಂದರ್ಭದಲ್ಲಿ ಜಾತ್ರಾ ಮಹೋತ್ಸವದ  ಅಧ್ಯಕ್ಷರಾಗಿ ಹಾರ್ನಳ್ಳಿ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಗಿರೀಶ್ ಗೌಡ, ಖಜಾಂಚಿ ಕೆಂಚಪ್ಪ ಹಾಗೂ ಸಹ ಕಾರ್ಯದರ್ಶಿಯಾಗಿ ಸಿದ್ದಪ್ಪನವರ ಹೆಸರನ್ನು, ಕಸಬಾ ಗೌಡ್ರು ಲಿಂಗರಾಜ್ ಪಾಟೀಲ್, ಮಾಜೇನಹಳ್ಳಿ ಗೌಡ್ರು ಚನ್ನಬಸಪ್ಪ ಅವರು  ಅಧಿಕೃತವಾಗಿ ಘೋಷಣೆ ಮಾಡಿದರು.

ಈ ವೇಳೆ ಡಬ್ಬಿ ಗಡಿಗೆಗೆ ಕಾಣಿಕೆ ಹಾಕುವ ಮೂಲಕ ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕ ಎಸ್. ರಾಮಪ್ಪ  ಚಾಲನೆ ನೀಡಿದರು. ನಂತರ ಡಬ್ಬಿ ಗಡಿಗೆ ಮೊದಲು ಮೂರ್ಕಲ್ ವಂಶದವರ  ಮನೆಗೆ ತೆರಳಿತು. 

ಈ ಸಂದರ್ಭದಲ್ಲಿ  ಬಣಕಾರ ಸಿದ್ದಪ್ಪ, ಆಂಜನೇಯ, ಶಾನಭೋಗರ ಗಿರೀಶ್,   ಕೆ.ಜಡಿಯಪ್ಪ, ಬಿ. ರೇವಣಸಿದ್ದಪ್ಪ, ನಂದಿಗಾವಿ ಶ್ರೀನಿವಾಸ್, ವೈ.ಎನ್. ಮಹೇಶ್, ಶಂಕರ್ ಖಟಾವ್ಕರ್, ಕೆ.ಬಿ. ರಾಜಶೇಖರ, ಕೆ. ಅಣ್ಣಪ್ಪ, ಸುರೇಶ್ ಚಂದಾಪೂರ್, ಶೇರಾಪುರ ರಾಜಪ್ಪ, ಎಸ್.ಎಂ. ವಸಂತ್,  ಮರಿಯೋಜಿರಾವ್, ರೇವಣಸಿದ್ದಪ್ಪ  ಇತರರು ಹಾಜರಿದ್ದರು. 

error: Content is protected !!