ಆನಂದ ಪಿಯು ಕಾಲೇಜಿನಲ್ಲಿ ಮಾದಕ ವ್ಯಸನ ಜಾಗೃತಿ

ಆನಂದ ಪಿಯು ಕಾಲೇಜಿನಲ್ಲಿ ಮಾದಕ ವ್ಯಸನ ಜಾಗೃತಿ

ದಾವಣಗೆರೆ, ನ.15- ಮಕ್ಕಳ ದಿನಾಚರಣೆಯ ಪ್ರಯುಕ್ತ ನೆಹರು ಯುವ ಕೇಂದ್ರ ಹಾಗೂ ಆನಂದ್ ಪದವಿ ಪೂರ್ವ ಕಾಲೇಜು  ಇವರ ಸಂಯುಕ್ತಾಶ್ರಯದಲ್ಲಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು.

ಪೊಲೀಸ್ ಅಧಿಕಾರಿ ಶ್ರೀಮತಿ ಶಿಲ್ಪ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಕುರಿತು ವಿಚಾರಗೋಷ್ಠಿ ನಡೆಸಿದರು. ಮಾದಕ ದ್ರವ್ಯ ಸೇವನೆಯಿಂದ ಬರುವ ಶಾರೀರಿಕ ಮತ್ತು ಮಾನಸಿಕ ಹಾನಿಯನ್ನು ತಡೆಗಟ್ಟಲು ಯುವಕರು ಜಾಗೃತರಾಗಬೇಕೆಂದು ಅವರು ಮನವಿ ಮಾಡಿದರು. ಮಾದಕ ವಸ್ತುಗಳ ವ್ಯಸನಿಗಳಾಗದೇ ಭಾರತದ ಸತ್ಪ್ರಜೆಗಳಾಗಲು ಯುವಜನತೆ ಪಾತ್ರ ಅಗತ್ಯ ಎಂದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಪ್ರಾಂಶುಪಾಲ ಅವಿನಾಶ್ ಜೆ. ನಾಯ್ಕ್  ವಹಿಸಿಕೊಂಡು, ವಿದ್ಯಾರ್ಥಿಗಳಲ್ಲಿ ಮಾದಕ ವ್ಯಸನಕ್ಕೆ ದಾಸರಾಗದೆ ಮಾನಸಿಕ ಶಕ್ತಿ ಮತ್ತು ಜೀವನ ಮೌಲ್ಯಗಳನ್ನು ಉಳಿಸಿಕೊಳ್ಳುವಂತೆ ಪ್ರೇರೇಪಿಸಿದರು.

 ಕಾಲೇಜಿನ ಮುಖ್ಯಸ್ಥರಾದ ಆನಂದ್ ಪೋತಿನ ತಮ್ಮ ಭಾಷಣಗಳಲ್ಲಿ ಮಾದಕ ದ್ರವ್ಯಗಳ ಕಾನೂನು ಬಾಹಿರತೆಯ ಬಗ್ಗೆ ಚರ್ಚಿಸಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಅವರ ಪ್ರಶ್ನೆಗಳಿಗೆ ಸ್ಪಷ್ಟೀಕರಣ ನೀಡಿದರು.

ವಿದ್ಯಾರ್ಥಿಗಳ ಬದ್ಧತೆಯನ್ನು ದೃಢಪಡಿಸಲು ನೆಹರು ಯುವ ಕೇಂದ್ರದ ಅಧಿಕಾರಿ ಸಂಜೀವ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಗಿರಿಬಾಬು ಕಿರಣ್ ಪೋತಿನ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!