ಹರಿಹರದಲ್ಲಿ ಬೃಹತ್ ಜಲ ಜಾಗೃತಿ, ಜನ ಜಾಗೃತಿ ಅಭಿಯಾನಕ್ಕೆ ಅದ್ಧೂರಿ ಸ್ವಾಗತ

ಹರಿಹರದಲ್ಲಿ ಬೃಹತ್ ಜಲ ಜಾಗೃತಿ, ಜನ ಜಾಗೃತಿ ಅಭಿಯಾನಕ್ಕೆ ಅದ್ಧೂರಿ ಸ್ವಾಗತ

ಹರಿಹರ, ನ.15- ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ನವದೆಹಲಿ ಮತ್ತು ಪರ್ಯಾವರಣ ಟ್ರಸ್ಟ್ (ಶಿವಮೊಗ್ಗ) ಇವರ ವತಿಯಿಂದ ಶೃಂಗೇರಿ ಯಿಂದ ಕಿಷ್ಕಿಂಧವರೆಗೆ ನಿರ್ಮಲ ತುಂಗಭದ್ರಾ ಅಭಿಯಾನದ ಬೃಹತ್ ಜಲ ಜಾಗೃತಿ  ಮತ್ತು ಜನ ಜಾಗೃತಿ ಪಾದಯಾತ್ರೆ ನಗರಕ್ಕೆ ಆಗಮಿಸಿತು.

ಶ್ರೀ ಹರಿಹರೇಶ್ವರ ದೇವಸ್ಥಾನ ಮುಂಭಾಗದಿಂದ ಆರಂಭಗೊಂಡ ಪಾದಯಾತ್ರೆಗೆ ಪಂಚಮಸಾಲಿ ಗುರುಪೀಠಾಧ್ಯಕ್ಷ ಶ್ರೀ ವಚನಾನಂದ ಮಹಾಸ್ವಾಮಿಗಳು, ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಚಾಲನೆ ನೀಡಿದರು.

ಧರ್ಮಸ್ಥಳ ಸಂಘದ ಕಾರ್ಯಕರ್ತರ ಕುಂಭಮೇಳ, ಶಾಲಾ ವಿದ್ಯಾರ್ಥಿಗಳ ಡ್ರಮ್ ಸೆಟ್, ಸಮಾಳ ಸೇರಿದಂತೆ ಇತರೆ ಕಲಾ ಮೇಳಗಳು ಪಾದಯಾತ್ರೆಗೆ ಮೆರಗು ನೀಡಿದವು. ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ನದಿಯ ಪರಿಸರವನ್ನು ಸ್ವಚ್ಛತೆಯಿಂದ ನೋಡಿಕೊಳ್ಳುವಂತೆ ಹಾಗೂ ನೀರು ಕಲುಷಿತವಾಗದಂತೆ ಎಚ್ಚರಿಕೆ ವಹಿಸಬೇಕು ಎಂಬ ಘೋಷಣೆ ಕೂಗಿದರು. 

ಪಾದಯಾತ್ರೆಯು ಶ್ರೀ ಹರಿಹರೇಶ್ವರ ದೇವಸ್ಥಾನ ಮುಂಭಾಗದಿಂದ ಆರಂಭಗೊಂಡು ದೇವಸ್ಥಾನ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ಮುಖ್ಯ ರಸ್ತೆ, ಗಾಂಧಿ ವೃತ್ತ ಹಳೆ ಪಿ.ಬಿ. ರಸ್ತೆಯ ಮೂಲಕ ಹಾದು ತುಂಗಭದ್ರಾ ನದಿಯ ದಡದಲ್ಲಿ ರುವ ತುಂಗಾರತಿ ಕಾರಿಡಾರ್ ಸ್ಥಳಕ್ಕೆ ಅಂತ್ಯಗೊಂಡಿತು.

ಈ ಸಂದರ್ಭದಲ್ಲಿ ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕರಾದ ಎಸ್.ರಾಮಪ್ಪ, ಮಹಿಮಾ ಪಟೇಲ್, ತಪೋವನ ಛೇರ್ಮನ್ ಶಶಿಕುಮಾರ್ ಮೆಹರ್ವಾಡೆ, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಜಿಪಂ ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಕಾಂಗ್ರೆಸ್ ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಗುತ್ತೂರು ಹಾಲೇಶ್ ಗೌಡ್ರು, ಸ್ವಾಭಿಮಾನ ಆಂದೋಲನದ ರಾಷ್ಟ್ರೀಯ ಸಂಚಾಲಕ ಬಸವರಾಜ್ ಪಾಟೀಲ್ ವೀರಾಪುರ, ಡಿ.ಜೆ. ಶಿವಾನಂದಪ್ಪ, ಬಿ.ಎಂ. ಕುಮಾರಸ್ವಾಮಿ ಶಿವಮೊಗ್ಗ ತಾಲ್ಲೂಕು ಸಂಚಾಲಕ ವೀರೇಶ್ ಅಜ್ಜಣ್ಣನವರ್, ಕೆ.ಸಿ. ಶಾಂತಕುಮಾರಿ,  ಕರಿಬಸಪ್ಪ ಕಂಚಿಕೇರಿ, ಸಂತೋಷ ಗುಡಿಮನಿ, ತುಳಜಪ್ಪ ಭೂತೆ, ಹಿಂಡಸಗಟ್ಟೆ ಲಿಂಗರಾಜ್, ಸಾಕಮ್ಮ , ಕವಿತಾ, ಮಂಜುಳಾ, ಸುಮಂಗಳಾ, ಜೆ.ಜೆ. ಮೆಹೆಂದಳೆ, ಡಾ. ಅಬ್ದುಲ್ ಖಾದರ್, ಎಂ. ಉಮಣ್ಣ, ಗುರುಬಸವರಾಜ್, ಪ್ರಾಂಶುಪಾಲರಾದ ಸುಜಾತ, ವಿರುಪಾಕ್ಷಪ್ಪ ಇತರರು ಹಾಜರಿದ್ದರು.

error: Content is protected !!