ದಾವಣಗೆರೆ, ನ.15- ದಾವಣಗೆರೆ ಬೈಸಿಕಲ್ ಕ್ಲಬ್ ವತಿಯಿಂದ ಸಿಗಂದೂರಿಗೆ ಸೈಕ್ಲಿಂಗ್ ಯಾತ್ರೆಯನ್ನು ನಾಡಿದ್ದು ದಿನಾಂಕ 17 ರ ಭಾನುವಾರ ಬೆಳಿಗ್ಗೆ 3 ಗಂಟೆಗೆ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪ್ರಾರಂಭಿಸಲು ಉದ್ದೇಶಿಸಲಾಗಿರುತ್ತದೆ.
ಸುಮಾರು 170 ಕಿ.ಮೀ. ಪ್ರಯಾಣವನ್ನು ಸೈಕ್ಲಿಂಗ್ ಮೂಲಕ ಕ್ರಮಿಸಿ ಶ್ರೀ ಸಿಗಂದೂರೇಶ್ವರಿ ದೇವಿ ದರ್ಶನ ಪಡೆದು ಹಿಂತಿರುಗಲಿದ್ದಾರೆ ಎಂದು ದಾವಣಗೆರೆ ಬೈಸಿಕಲ್ ಕ್ಲಬ್‌ನ ಅಧ್ಯಕ್ಷ ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.
ಸೈಕ್ಲಿಂಗ್ ಯಾತ್ರೆಯಲ್ಲಿ ದಾವಣಗೆರೆ ಬೈಸಿಕಲ್ ಕ್ಲಬ್‌ನ ಕಾರ್ಯದರ್ಶಿ ಕೆ.ಎಸ್. ಮಹೇಶ್, ಡಾ. ಸುರೇಶ್, ಡಾ. ನವೀನ್, ಡಾ. ಪಾಟೀಲ್, ಡಾ. ಮಾಲತೇಶ್, ಡಾ. ಸುನಿಲ್ ಬ್ಯಾಡಗಿ, ದೇವರಾಜ್, ಪ್ರಸಾದ್, ಅರ್ಚೀಸ್ ನಾಗರಾಜ್, ಹರೀಶ್ ಕೆ.ಆರ್. ಮತ್ತು ಕಿರಣ್ ಬಾಳೆಹೊಲದ ಸೇರಿದಂತೆ ಇನ್ನೂ ಮುಂತಾದ ಒಟ್ಟು 15 ಸೈಕ್ಲಿಸ್ಟ್‌ಗಳು ಪ್ರಯಾಣಿಸಲಿದ್ದಾರೆ.
ದಾವಣಗೆರೆ-ಸಿಗಂದೂರೇಶ್ವರಿ ಸೈಕಲ್ ಯಾತ್ರೆ ಯಶಸ್ವಿಯಾಗಲೆಂದು ದಾವಣಗೆರೆ ಬೈಸಿಕಲ್ ಕ್ಲಬ್‌ನ ನಿರ್ದೇಶಕರು, ಸದಸ್ಯರು ಮತ್ತು ಹಿಮಾಲಯನ್ ಅಡ್ವೆಂಚರ್ ನೇಚರ್ ಅಕಾಡೆಮಿ ಕೊಟ್ರೇಶ್ ಮತ್ತು ಕರುನಾಡ ಸಮರ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಸುರೇಶ್ ಐಗೂರ್, ಕರುನಾಡ ಸಮರ ಸೇನೆ ರಾಜ್ಯ ವರ್ತಕರ ಘಟಕದ ಅಧ್ಯಕ್ಷರು ಶುಭ ಹಾರೈಸಿದಾರೆ.
ಯಾತ್ರಾ ಮಾರ್ಗ: ದಾವಣಗೆರೆ-ಹರಿಹರ-ಇಟಗಿ-ಹಲಗೇರಿ-ಕೋಡ-ಹಿರೇಕೆರೂರು -ಶಿರಾಳಕೊಪ್ಪ-ತಡಗಣಿ ಕ್ರಾಸ್-ಇಂಡುವಳ್ಳಿ-ಉಳವಿ-ಸಾಗರ-ಇಕ್ಕೇರಿ-ಆವಿನ ಹಳ್ಳಿ-ಹುಲಿ ದೇವರ ಬನ-ಹೊಳೆಬಾಗಿಲು-ಸಿಗಂದೂರು.