ಜಗಳೂರು: ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ಶ್ರೀನಿವಾಸ್

ಜಗಳೂರು: ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ಶ್ರೀನಿವಾಸ್

ಜಗಳೂರು, ನ. 14 – ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷರಾಗಿ ಜೆ. ಶ್ರೀನಿವಾಸ್  ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದಿನ ಅಧ್ಯಕ್ಷೆ ಜಿ.ಎಸ್. ವೀಣಾ ಗೋಗುದ್ದುರಾಜ್ ಅವರ ರಾಜೀನಾಮೆ‌ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ  (ಇಂದು) ಗುರುವಾರ ಪಟ್ಟಣದ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ಸಭಾಂಗಣದಲ್ಲಿ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ನಡೆಯಿತು.

ಅಧ್ಯಕ್ಷ  ಸ್ಥಾನಕ್ಕೆ ಜೆ. ಶ್ರೀನಿವಾಸ್ ಒಬ್ಬರೇ  ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ   ಜೆ. ಶ್ರೀನಿವಾಸ್ ಅವಿರೋಧಯಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಿಡಿಒ ಹರೀಶ್  ತಿಳಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ದ್ಯಾಮಕ್ಕ, ನಿರ್ದೇಶಕ ಕೆ.ಬಿ. ಸಿದ್ದೇಶ್, ಧನಂಜಯ್ ರಡ್ಡಿ, ಚಂದ್ರಪ್ಪ, ವಾಮದೇವಪ್ಪ, ತಿಮ್ಮರಾಯಪ್ಪ, ಚೌಡಮ್ಮ, ಎಂ.ವಿ.ರಾಜು, ರಾಘವೇಂದ್ರ, ಹಾಲಸ್ವಾಮಿ, ಲೋಲಾಕ್ಷಿ, ಸಿದ್ದೇಶ್, ಚಂದ್ರಪ್ಪ, ಸಣ್ಣಸೂರಯ್ಯ, ನರೇಂದ್ರಬಾಬು, ಸೇರಿದಂತೆ ಇತರರುಇದ್ದರು.

error: Content is protected !!