ಹರಿಹರ, ನ. 14 – ನಗರದಲ್ಲಿ ಮಾರ್ಚ್ 18 ರಿಂದ 22 ರವರೆಗೆ ನಡೆಯುವ ಗ್ರಾಮ ದೇವತೆ ಊರಮ್ಮ ದೇವಿ ಹಬ್ಬದ ಅಂಗವಾಗಿ ನಗರದ ಶಿಬಾರ ವೃತ್ತದಲ್ಲಿರುವ ಮೂಲ ಕಸಬಾ ಊರಮ್ಮ ದೇವಿ ದೇವಸ್ಥಾನದ ಸಭಾಂಗಣದಲ್ಲಿ ನಾಳೆ ದಿನಾಂಕ 15 ಶುಕ್ರವಾರ ಉತ್ಸವ ಸಮಿತಿಯ ನೂತನ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಖಜಾಂಚಿ ಮತ್ತು ಸಹ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆಯಾದವರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿ, ತದನಂತರ ಹಬ್ಬದ ಡಬ್ಬಿ ಗಡಿಗೆ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಸಬಾ ಗೌಡ್ರು ಲಿಂಗರಾಜ್ ಪಾಟೀಲ್ ಮತ್ತು ಮಾಜೇನಹಳ್ಳಿ, ಗ್ರೌಡ್ರು ಚನ್ನಬಸಪ್ಪ ತಿಳಿಸಿದ್ದಾರೆ.
December 22, 2024