ದಾವಣಗೆರೆ, ನ.14- ಇಂದಿನಿಂದ ಇದೇ ದಿನಾಂಕ 20ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ 3ನೇ ಕರ್ನಾಟಕ ರಾಜ್ಯ ಮಿನಿ ಒಲಿಂಪಿಕ್ ಫುಟ್‌ಬಾಲ್ ಇವೆಂಟ್-2024 ಗೆ ಜಿಲ್ಲಾ ಫುಟ್‌ಬಾಲ್ ತಂಡ 14 ವರ್ಷದೊಳಗಿನವರ ಬಾಲಕ ಮತ್ತು ಬಾಲಕಿಯರ ತಂಡವನ್ನು ಫುಟ್‌ಬಾಲ್ ಸಂಘದ ಅಧ್ಯಕ್ಷರು ಮತ್ತು ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಅವರು ಬಾಲಕ ಮತ್ತು ಬಾಲಕಿಯರಿಗೆ ಗೆದ್ದು ಬನ್ನಿ ಎಂದು ಸ್ಫೂರ್ತಿ ತುಂಬಿ ಶುಭ ಕೋರಿದ್ದರು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಲ್ಲಾವಲಿ ಮುಜಾಹಿದ್ ಖಾನ್, ಖಜಾಂಚಿ ಚಂದ್ರಶೇಖರ ಎಸ್.ಕೆ. ಡಿಡಿಎಫ್ಎ, ಸದಸ್ಯ ಮಹಮ್ಮದ್ ರಫೀಕ್ ಜಿ.ಬಿ., ಯುವರಾಜ್, ಅಶ್ರಫ್ ಅಲಿ, ಅಹಮದ್ ಮುಜತಬ, ತನ್ವೀರ್ ಅಹಮದ್ ಮುಜತಬಾ, ಎ. ಸರ್ಫಾಜ್ ಖಾನ್ ಮತ್ತಿತರರಿದ್ದರು.
December 23, 2024