ಶ್ರೀ ಜಯದೇವ ಮುರುಘರಾಜೇಂದ್ರ ವೃತ್ತದಲ್ಲಿರುವ ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದಲ್ಲಿ ಇಂದು ಸಂಜೆ 4-30 ಕ್ಕೆ ಶ್ರೀ ಕಾಗಿನೆಲೆ ಶ್ರೀಮಠದ ದಾಸೋಹಕ್ಕಾಗಿ ಅಕ್ಕಿ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ. ಶ್ರೀ ಕಾಗಿನೆಲೆ ಕನಕ ಗುರುಪೀಠದ ಶಾಖಾಮಠ ಹೊಸದುರ್ಗದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸ್ವಯಂ ಪ್ರೇರಿತರಾಗಿ, ದಾಸೋಹ ನಿಧಿಗೆ ಅಕ್ಕಿ ಸಮರ್ಪಣೆ ಮಾಡುವವರು ಕುರುಬರ ವಿದ್ಯಾವರ್ಧಕ ಸಂಘದ ಕಛೇರಿಗೆ ಸಲ್ಲಿಸಬಹುದು. ವಿವರಕ್ಕೆ ಸಂಪರ್ಕಿಸಿ : 9880514889, 9449251123.
December 11, 2024