ಬ್ಯಾಡಗಿ ಪಟ್ಟಣದ ಎಸ್‌ಜೆಜೆಎಂ ತಾಲ್ಲೂಕು ಕ್ರೀಡಾಂಗಣದಲ್ಲಿ ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳ ಅಧ್ಯಾತ್ಮ ಪ್ರವಚನ ಇಂದಿನಿಂದ 12 ದಿನಗಳ ಕಾಲ ಪ್ರತಿದಿನ ಸಂಜೆ 6 ರಿಂದ 7 ರವರೆಗೆ ನಡೆಯಲಿದೆ. ಜನರಲ್ಲಿ ಧಾರ್ಮಿಕ ಜಾಗೃತಿ ಮೂಡಿಸಲು ಪ್ರತಿದಿನ ಬೆಳಿಗ್ಗೆ 6.30 ರಿಂದ ಸದ್ಭಾವನಾ ಪಾದಯಾತ್ರೆ ನಡೆಯಲಿದೆ. ಇಂದು ಬಸವೇಶ್ವರ ನಗರ, ನಾಳೆ ಸ್ವಾತಂತ್ರ್ಯ ಯೋಧರ ಭವನ, 17ರಂದು ವಿದ್ಯಾನಗರದ ಪಂಚಲಿಂಗೇಶ್ವರ ದೇವಸ್ಥಾನ ಹಾಗೂ 18 ರಂದು ಕಲ್ಲೇದೇವರು, 19ರಂದು ಮಲ್ಲೂರು, 20ರಂದು ಬಿಸಲಳ್ಳಿ, 21ರಂದು ಬುಡಪನಹಳ್ಳಿ 23ರಂದು ಕದರಮುಂಡಲಗಿ, 24 ರಂದು ಶಿಡೇನೂರ ಗ್ರಾಮಗಳಲ್ಲಿ ಶ್ರೀಗಳಿಂದ ಸದ್ಭಾವನಾ ಪಾದಯಾತ್ರೆ ನಡೆಯಲಿದೆ.
December 3, 2024