ಶ್ರೀಲಂಕಾ ಸೇರಿದಂತೆ ವಿವಿಧ ರಾಜ್ಯಗಳಿಂದ 50 ತಂಡಗಳ 750ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗಿ
ದಾವಣಗೆರೆ, ನ.14- ದಾವಣಗೆರೆ ಇಲೆವೆನ್ ಕ್ರಿಕೆಟ್ ಕ್ಲಬ್ ಹಾಗೂ ಜಿಲ್ಲಾ ಕ್ರೀಡಾಪಟುಗಳ ಸಂಘದ ಸಹಯೋಗದಲ್ಲಿ ಇದೇ ದಿನಾಂಕ 27 ರಿಂದ ಡಿಸೆಂಬರ್ 1 ರವರೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ದಿ. ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸವಿನೆನಪಿಗಾಗಿ 17 ನೇ ಬಾರಿಗೆ ರಾಷ್ಟ್ರಮಟ್ಟದ ಹೊನಲು ಬೆಳಕಿನ ಲೀಗ್ ಕಮ್ ನಾಕೌಟ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ಹಮ್ಮಿಕೊಳ್ಳಲಾಗಿದೆ ಎಂದು ದಾವಣಗೆರೆ ಇಲೆವೆನ್ಸ್ ಕ್ರಿಕಟ್ ಕ್ಲಬ್ ಹಾಗೂ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷರೂ ಆಗಿರುವ ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದೇ ದಿನಾಂಕ 27 ರಂದು ಸಂಜೆ 6.30 ಕ್ಕೆ ನಡೆಯುವ ಉದ್ಘಾಟನಾ ಸಮಾರಂ ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ, ಬಸವರಾಜ್ ವಿ. ಶಿವಗಂಗಾ, ಲೆಕ್ಕಪರಿಶೋಧಕ ಡಾ. ಅಥಣಿ ಎಸ್. ವೀರಣ್ಣ, ಜಿಲ್ಲಾಧಿಕಾರಿ ಜಿ.ಎನ್. ಗಂಗಾಧರ ಸ್ವಾಮಿ, ಎಸ್ಪಿ ಉಮಾ ಪ್ರಶಾಂತ್, ಜಿ.ಪಂ. ಸಿಇಓ ಸುರೇಶ್ ಇಟ್ನಾಳ್ ಮತ್ತಿತರರು ಭಾಗವಹಿಸಲಿದ್ದಾರೆ.
ಟೂರ್ನಿಯಲ್ಲಿ ಶ್ರೀಲಂಕಾ ತಂಡ ಸೇರಿದಂತೆ ದಾವಣಗೆರೆ, ಬೆಂಗಳೂರು, ತುಮಕೂರು, ಶಿವಮೊಗ್ಗ, ತಮಿಳುನಾಡು, ಮಹಾರಾಷ್ಟ್ರಗಳ 50 ತಂಡಗಳಿಂದ 750 ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಳ್ಳಲಿ ದ್ದಾರೆ. ಹೊರಗಡೆಯಿಂದ ಬರುವವರಿಗೆ ಉಚಿತವಾಗಿ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
ಟೂರ್ನಿಯಲ್ಲಿ ವಿಜೇತ ತಂಡಕ್ಕೆ ಪ್ರಥಮ 55,555 ರೂ. ನಗದು, ಶಾಮನೂರು ಡೈಮಂಡ್ ಕಪ್, ದ್ವಿತೀಯ ತಂಡಕ್ಕೆ 3,5, 555 ರೂ. ನಗದು, ಶಿವಗಂಗಾ ಕಪ್, ತೃತೀಯ ತಂಡಕ್ಕೆ 1,55,555 ರೂ. ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ವೈಯಕ್ತಿಕ ಉತ್ತಮ ಆಲ್ ರೌಂಡರ್‌ಗೆ ಹೀರೋ ಹೋಂಡಾ ಬೈಕ್ ನೀಡಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅಫಿಷಿಯಲ್ ಕಪ್ ಪಂದ್ಯಾವಳಿಯಲ್ಲಿ ಜಿಲ್ಲಾಧಿಕಾರಿ, ಪೊಲೀಸ್, ಪತ್ರಕರ್ತರು, ವಕೀಲರು, ವರ್ತಕರ ತಂಡಗಳು ಭಾಗವಹಿಸಲಿವೆ. ಜಿಲ್ಲಾ ಧಿಕಾರಿ ಗಂಗಾಧರಸ್ವಾಮಿ ಕೂಡ ಆಟದಲ್ಲಿ ಪಾಲ್ಗೊಳ್ಳುವರು. ಯೂಟ್ಯೂಬ್‌ನಲ್ಲಿ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿದೆ ಎಂದರು.
ಸಂಘದ ಪದಾಧಿಕಾರಿಗಳಾದ ಶ್ರೀನಿವಾಸ್ ಶಿವಗಂಗಾ, ಜಯಪ್ರಕಾಶ್ ಗೌಡ, ಹಾಲಪ್ಪ, ಹೆಚ್. ಮಹದೇವ, ಶಿವಾನಂದ್, ರಂಗನಾಥ್, ಸುರೇಶ್, ಯೋಗೀಶ್, ಚಂದ್ರು, ಶಾಂತಕುಮಾರ್, ಜಿ.ಬಿ. ಪಾಟೀಲ್, ರಾಘವೇದ್ರ ಉಪಸ್ಥಿತರಿದ್ದರು.