ಜಿಲ್ಲಾ ಆರ್ಯ ಈಡಿಗರ ಸಂಘದ ಪ್ರತಿಭಾ ಪುರಸ್ಕಾರದಲ್ಲಿ ಶ್ರೀ ಆರ್ಯ ರೇಣುಕಾನಂದ ಸ್ವಾಮೀಜಿ ಆಶಯ
ದಾವಣಗೆರೆ, ನ.12- ಸಮಾಜದಿಂದ ಸಹಾಯ ಪಡೆದ ವಿದ್ಯಾರ್ಥಿಗಳು ತಾವು ತಮ್ಮ ವ್ಯಾಸಂಗ ಮುಗಿಸಿ, ಗಳಿಸುವ ಸಮಯದಲ್ಲಿ ತಾವು ಸಹಾಯ ಪಡೆದ ಸಮಾಜವನ್ನು ಮರೆಯಬಾರದು ಮತ್ತು ತಮ್ಮ ದುಡಿಮೆಯ ಸ್ವಲ್ಪ ಭಾಗವನ್ನು ಸಮಾಜದ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕು ಹಾಗೂ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ಉತ್ತಮ ಪ್ರಜೆಗಳಾಗಿ ರೂಪಿಸ ಬೇಕೆಂದು ಶ್ರೀ ಆರ್ಯ ರೇಣುಕಾನಂದ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.
ಜಿಲ್ಲಾ ಆರ್ಯ ಈಡಿಗರ ಸಂಘ ಮತ್ತು ಶ್ರೀ ರೇಣುಕಾಂಬ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇವರುಗಳ ಸಂಯುಕ್ತಾಶ್ರಯದಲ್ಲಿ ಆರ್ಯ ಈಡಿಗ ಹಾಸ್ಟೆಲ್ ಆವರಣದಲ್ಲಿ ಇಂದು ಏರ್ಪಾಡಾಗಿದ್ದ 2023 – 24 ನೇ ಸಾಲಿನ ವಿವಿಧ ತರಗತಿಗಳಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಪಾಸಾದ 45 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಕಾರ್ಯಕ್ರಮದಲ್ಲಿ ಶ್ರೀಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಆರ್ಯ ಈಡಿಗರ ಸಂಘಕ್ಕೆ ಖರ್ಚಿನ ಹೊರೆಯಾಗಬಾರದೆಂದು ಪೋಷಕರೇ ದೇಣಿಗೆ ನೀಡಿ ಮಕ್ಕಳಿಗೆ ಪ್ರತಿಭಾ ವೇತನ ನೀಡುವ ಕಾರ್ಯಕ್ರಮ ನಡೆಸುತ್ತಿರುವುದು ಅತ್ಯಂತ ಸ್ತುತ್ಯಾರ್ಹ ಕಾರ್ಯ ಎಂದರು.
ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಹೆಚ್. ಶಂಕರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಶಾಂತರಾಮ್, ರವೀಂದ್ರ ಬಾಬು, ಕಾರ್ಯದರ್ಶಿ ಎ. ನಾಗರಾಜ್, ಖಜಾಂಚಿ ಈ. ದೇವೇಂದ್ರಪ್ಪ, ಸಹ ಕಾರ್ಯದರ್ಶಿ ಎಸ್. ಭರಮಪ್ಪ, ರೇಣುಕಾಂಬ ಕ್ರೆಡಿಟ್ ಕೋ-ಆಪ್. ಸೊಸೈಟಿ ಅಧ್ಯಕ್ಷರಾದ ಶ್ರೀಮತಿ ಸುಮಾ ಭರಮಪ್ಪ ರಾಮದಾಸ್, ಈ. ರಾಜಣ್ಣ, ವೈ. ಕೃಷ್ಣಮೂರ್ತಿ, ಗೋವಿಂದರಾಜ್, ಜಯಪ್ರಕಾಶ್, ಎಸ್. ಮಂಜಪ್ಪ, ಮಹಾಬಲೇಶ್ವರ, ಗವಿ ಸಿದ್ದೇಶ್ವರ್, ಟಿ.ಟಿ. ರಘು, ಗಂಗಾಧರ್, ಈ. ಲಕ್ಷ್ಮಣ, ಓಂಕಾರ ಮೂರ್ತಿ, ಬಾಲರಾಜ್, ಲೋಕಣ್ಣ, ನಾಗರಾಜ್ ಬಾಬು, ಪರಶುರಾಮಪ್ಪ, ಟಿ. ಮಹಂತೇಶ್ ಮತ್ತು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.