ಹರಿಹರ, ನ.12- ನಗರದಲ್ಲಿ ದೂಡಾ ಶಾಖಾ ಕಚೇರಿ ಆರಂಭಿಸಬೇಕೆಂಬ 36 ವರ್ಷಗ ಬೇಡಿಕೆ ಈಗ ಈಡೇರಿದೆ ಎಂದು ದೂಡ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಹೇಳಿದರು.
ನಗರಸಭೆ ಆವರಣದಲ್ಲಿ ಸೋಮವಾರ ಅವರು ದೂಡ ಶಾಖಾ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಜಿಲ್ಲೆಯ 45 ಹಳ್ಳಿಗಳು ಸೇರುತ್ತವೆ. ಹರಿಹರ ನಗರ ವ್ಯಾಪ್ತಿಯಲ್ಲಿ 17 ಹಳ್ಳಿಗಳನ್ನು ಒಳಗೊಂಡಿದೆ. ಹರಿಹರ ನಗರದ ಜನತೆ ಶಾಖಾ ಕಚೇರಿಯ ಸೌಲಭ್ಯವನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.