ಜಲಜೀವನ್ ಮಿಷನ್ ಕಾಮಗಾರಿ ಗುಣಮಟ್ಟದ್ದಾಗಿರಲಿ : ಸಿಇಓ ಸುರೇಶ್ ಸೂಚನೆ

ಜಲಜೀವನ್ ಮಿಷನ್ ಕಾಮಗಾರಿ ಗುಣಮಟ್ಟದ್ದಾಗಿರಲಿ : ಸಿಇಓ ಸುರೇಶ್ ಸೂಚನೆ

ಜಗಳೂರು, ನ. 12 – ತಾಲ್ಲೂಕಿನ ದೊಣೆಹಳ್ಳಿ ಗ್ರಾಮಕ್ಕೆ ಜಿ.ಪಂ. ಸಿಇಓ ಸುರೇಶ್ ಹಿಟ್ನಾಳ್ ದಿಢೀರ್ ಭೇಟಿ ನೀಡಿ ಜಲಜೀವನ್ ಮಿಷನ್ ಪೈಪ್ ಲೈನ್, ನಳ ಕಾಮಗಾರಿ ವೀಕ್ಷಿಸಿ ಮಾತನಾಡಿದರು.

ಸಿಮೆಂಟ್ ಕಾಮಗಾರಿ ಗುಣಮಟ್ಟದ್ದಾಗಿರಲಿ ನಳದ ತಳಭಾಗದಲ್ಲಿ ನೀರು ಸೋರಿಕೆಯಾಗಬಾರದು, ಉಳಿದ ಹಳ್ಳಿಗಳಲ್ಲಿಯೂ ತಾಂತ್ರಿಕ ದೋಷ ಸರಿಪಡಿಸಿಕೊಳ್ಳಬೇಕು ತಂತ್ರಜ್ಞರ ಸಲಹೆ ಪಡೆದು ಕಾಮಗಾರಿ ಪೂರ್ಣಗೊಳಿಸಿ ಗ್ರಾಮ ಪಂಚಾಯಿತಿಗೆ ಸುಪರ್ದಿಗೆ ನೀಡಬೇಕು ಎಂದು ಗುತ್ತಿಗೆದಾರರು ಹಾಗೂ ಎಇಇ ಸಾಧಿಕ್ ಉಲ್ಲಾ ಅವರಿಗೆ ಸೂಚಿಸಿದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಹೊಸ ಹಟ್ಟಿಯ ಅಂಬೇಡ್ಕರ್ ವಸತಿ ಶಾಲೆಗೆ ಭೇಟಿ ನೀಡಿ ಮೆನು ಚಾರ್ಟ್ ಪ್ರಕಾರ ಊಟ ಪೂರೈಕೆ ಮಾಡಬೇಕು.ಶಾಲಾ ಆವರಣದಲ್ಲಿ ಸುಸಜ್ಜಿತ ಆಟದ ಮೈದಾನವನ್ನು ಗ್ರಾಮ ಪಂಚಾಯಿತಿಯಿಂದ ಸ್ವಚ್ಛತೆಗೊಳಿಸಿ ಕ್ರೀಡಾಂಗಣ ನಿರ್ಮಾಣ ಮಾಡಿಕೊಳ್ಳಲು ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶಕ್ಕೆ ಒತ್ತುಕೊಡಲು ತಿಳಿಸಿದರು.

ಈ ಸಂದರ್ಭದಲ್ಲಿ ತಾ.ಪಂ‌. ಇಓ ಕೆಂಚಪ್ಪ, ಕುಡಿಯುವ ನೀರು ನೈರ್ಮಲ್ಯ ಇಲಾಖೆ ಎಇಇ ಸಾಧಿಕ್ ಉಲ್ಲಾ, ಪ್ರಾಂಶುಪಾಲ ಅಮರೇಶ್, ಪಿಡಿಓ ಕೊಟ್ರೇಶ್  ಇದ್ದರು.

error: Content is protected !!