ಮಲೇಬೆನ್ನೂರು, ನ. 12 – ಪಟ್ಟಣದಲ್ಲಿ ಹಾಯ್ದ ಹೋಗಿರುವ ಶಿವಮೊಗ್ಗ ಹದ್ದಾರಿ ದೊಡ್ಡ ದೊಡ್ಡ ಗುಂಡಿಗಳಿಂದ ಕೂಡಿದ್ದು, ರಸ್ತೆ ಸಂಪುರ್ಣವಾಗಿ ಹದಗೆಟ್ಟು ಹೋಗಿದೆ.
ನಿತ್ಯ ಸಾವಿರಾರು ವಾಹನಗಳ ಸಂಚರಿಸುವ ಮತ್ತು ಶಿವಮೊಗ್ಗ, ಮೈಸೂರು ಮಂಗಳೂರು ಹಾಗೂ ಹರಿಹರ ದಾವಣಗೆರೆ, ಹಾವೇರಿ ಹೊಸಪೇಟೆ ನಗರಗಳಿಗೆ ಸಂಪರ್ಕಿಸುವ ರಸ್ತೆ ಇದಾಗಿದ್ದು ಇಂತಹ ಪ್ರಮುಖ ರಸ್ತೆಯಲ್ಲಿ ಮಲೇಬೆನ್ನೂರಿನಿಂದ ಕುಂಬಳೂರುವರೆಗೆ ಮತ್ತು ನಂದಿತಾವರೆಯಿಂದ ಹರಿಹರ ನಗರದವರೆಗೆ ಸಾಕಷ್ಟು ಗುಂಡಿಗಳು ಬಿದ್ದವೆ.
ಈ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಮತ್ತು ಜನಪ್ರತಿನಿಧಿಗಳಿಗೆ ಸಾಕಷ್ಟು ಮನವಿ ಮಾಡಿದ್ದರೂ ಪ್ರಯೋಜನವಾಗದ ಕಾರಣ ಮಲೇಬೆನ್ನೂರು ಲಯನ್ಸ್ ಜ್ಲಬ್ ವತಿಯಿಂದ ಹೆದ್ದಾರಿ ಗುಂಡಿಗಳಿಗೆ ಕಂಕರ ಮಂಣ್ಣು ಹಾಕುವ ಕೆಲಸವನ್ನು ಮಂಗಳವಾರ ಆರಂಬಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಪ್ರತಿನಿತ್ಯ ಈ ಗುಂಡಿ ಬಿದ್ದರುವ ರಸ್ತೆಯಲ್ಲಿ ಬೈಖ್ ಸವಾರರು ಪ್ರಯಾಣಿಸುವಾಗ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಬಿದ್ದು, ಗೋಳಾಡಿದ್ದನ್ನು ಕಣ್ಣಾರೆ ಕಂಡಿರುವ ನಾವು ಲಯನ್ಸ್ ಕ್ಲಬ್ ವತಿಯಿಂದ ಗುಂಡಿಗಳಿಗೆ ಕಂಕರ ಹಾಕುವ ಕೆಲಸ ಆರಂಭಿಸಿದ್ದೇವೆ. ಬುಧವಾರ ಈ ಕೆಲಸ ನಡೆಯಲಿದೆ ಎಂದು ಒ.ಜಿ. ರುದ್ರಗೌಡ ಚಿಟ್ತಕ್ಕಿ ನಾಗರಾಜ್ ತಿಳಿಸಿದರು.